ನಾಲ್ಕು ವರ್ಷ ಶ್ರಮವಹಿಸಿದರೂ ಲಾಲ್ ಸಿಂಗ್ ಛಡ್ಡಾದಿಂದ ಅಮೀರ್ ಖಾನ್ ಗೆ ನಯಾಪೈಸೆ ಬರಲಿಲ್ಲ!

ಗುರುವಾರ, 1 ಸೆಪ್ಟಂಬರ್ 2022 (09:00 IST)
ಮುಂಬೈ: ಬಹಿಷ್ಕಾರ ಅಭಿಯಾನಕ್ಕೆ ಸಿಲುಕಿ ಬಾಕ್ಸ್ ಆಫೀಸ್ ನಲ್ಲಿ ದಯನೀಯ ಸೋಲು ಅನುಭವಿಸಿದ್ದ ಲಾಲ್ ಸಿಂಗ್ ಛಡ್ಡಾ ಸಿನಿಮಾದಿಂದಾಗಿ ಅಮೀರ್ ಖಾನ್ ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.

ನಿರ್ಮಾಪಕರಿಗಾದ ನಷ್ಟ ಭರ್ತಿ ಮಾಡಲು ಅಮೀರ್ ತಮ್ಮ ಸಂಭಾವನೆಯನ್ನೇ ಬಿಟ್ಟುಕೊಡುತ್ತಿದ್ದಾರೆ. ಸಿನಿಮಾ ಹಾಗೂ ಹೀಗೂ ಕಷ್ಟಪಟ್ಟು 100 ಕೋಟಿ ರೂ. ಗಳಿಕೆ ಮಾಡಿದೆಯಷ್ಟೇ. ಅಮೀರ್ ಸಂಭಾವನೆ ತ್ಯಾಗ ಮಾಡಿದ್ದರಿಂದ ನಿರ್ಮಾಪಕರ ನಷ್ಟ ಕೊಂಚ ಕಡಿಮೆಯಾಗಿದೆ.

ಅಮೀರ್ ಖಾನ್ ಈ ಸಿನಿಮಾಗಾಗಿ ಸುಮಾರು ನಾಲ್ಕು ವರ್ಷ ವ್ಯಯಿಸಿದ್ದರು. ಆದರೆ ನಯಾ ಪೈಸೆ ಬರಲಿಲ್ಲ ಎನ್ನುವುದು ವಿಪರ್ಯಾಸ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ