ಮಗುವಾದ ಖುಷಿಯಲ್ಲಿ ಕ್ಯಾಮರಾ ಮ್ಯಾನ್ ಗಳಿಗೆ ಸ್ವೀಟ್ ಬಾಕ್ಸ್ ಹಂಚಿದ ಆನಂದ್ ಅಹುಜಾ, ಅನಿಲ್ ಕಪೂರ್

ಶುಕ್ರವಾರ, 26 ಆಗಸ್ಟ್ 2022 (15:49 IST)
ಮುಂಬೈ: ಮೊನ್ನೆಯಷ್ಟೇ ಗಂಡು ಮಗುವಿಗೆ ಜನ್ಮವಿತ್ತಿದ್ದ ನಟಿ ಸೋನಂ ಕಪೂರ್ ಈಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮಗುವಿನೊಂದಿಗೆ ಮನೆಗೆ ತೆರಳಿದ್ದಾರೆ.

ಈ ವೇಳೆ ಪತಿ ಆನಂದ್ ಅಹುಜಾ, ತಂದೆ ಅನಿಲ್ ಕಪೂರ್ ಸೋನಂ ಜೊತೆಗಿದ್ದರು. ಇನ್ನು, ಆನಂದ್-ಸೋನಂ ಫೋಟೋ ತೆಗೆಯಲು ಆಸ್ಪತ್ರೆ ಬಳಿ ನೂರಾರು ಫೋಟೋಗ್ರಾಫರ್ ಗಳು ಜಮಾಯಿಸಿದ್ದರು.

ಇವರೆಲ್ಲರಿಗೂ ಆನಂದ್ ಅಹುಜಾ ಮತ್ತು ಅನಿಲ್ ಕಪೂರ್ ಕೈಯಾರೆ ಸ್ವೀಟ್ ಬಾಕ್ಸ್ ಹಂಚಿ ಸಂಭ್ರಮಿಸಿದ್ದಾರೆ. ಆಗಸ್ಟ್ 20 ರಂದು ಸೋನಂ ಗಂಡು ಮಗುವಿಗೆ ಜನ್ಮವಿತ್ತಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ