ಅಮೀರ್ ಖಾನ್ ಗೆ ಒಟಿಟಿಯೂ ಕೈಹಿಡಿಯುತ್ತಿಲ್ಲ!

ಭಾನುವಾರ, 28 ಆಗಸ್ಟ್ 2022 (08:50 IST)
ಮುಂಬೈ: ಲಾಲ್ ಸಿಂಗ್ ಛಡ್ಡಾ ಥಿಯೇಟರ್ ನಲ್ಲಿ ಬಿಡುಗಡೆಯಾಗಿ ಸೋಲು ಅನುಭವಿಸಿದ ಬಳಿಕ ನಟ ಅಮೀರ್ ಖಾನ್ ಒಟಿಟಿಯಲ್ಲಿ ಲಾಭ ಮಾಡಬಹುದು ಎಂಬ ಲೆಕ್ಕಾಚಾರ ಹಾಕಿದ್ದರು.

ಆದರೆ ಒಟಿಟಿ ಕೂಡಾ ಅಮೀರ್ ಗೆ ಕೈಕೊಟ್ಟಿತ್ತು. ಥಿಯೇಟರ್ ನಲ್ಲಿ ಉತ್ತಮ ಪ್ರದರ್ಶನ ಕಂಡ ಸಿನಿಮಾಗಳಿಗೆ ಮಾತ್ರ ಒಟಿಟಿಯಲ್ಲೂ ಬೇಡಿಕೆ ಬರುತ್ತದೆ. ಆದರೆ ಲಾಲ್ ಸಿಂಗ್ ಛಡ್ಡಾ ಥಿಯೇಟರ್ ನಲ್ಲೇ ದಯನೀಯ ಸೋಲು ಅನುಭವಿಸಿತ್ತು. ಹಾಕಿದ ಬಂಡವಾಳವೂ ಬರಲಿಲ್ಲ.

ಹೀಗಾಗಿ ನೆಟ್ ಫ್ಲಿಕ್ಸ್ ಈ ಮೊದಲು 150 ಕೋಟಿ ರೂ.ಗೆ ಮಾಡಿಕೊಂಡಿದ್ದ ಒಪ್ಪಂದ ರದ್ದುಪಡಿಸಿ ಕೇವಲ 80 ಕೋಟಿ ರೂ. ಚಿತ್ರದ ಹಕ್ಕು ಖರೀದಿಸುವ ಹೊಸ ಒಪ್ಪಂದ ಮಾಡಿಕೊಂಡಿದೆ. ಈ ಮೂಲಕ ಒಟಿಟಿಯಲ್ಲೂ ಅಮೀರ್ ಭಾರೀ ನಷ್ಟ ಅನುಭವಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ