ನಟ ಫರ್ಹಾನ್ ಅಖ್ತರ್ ಪಶ್ಚಿಮ ಬಂಗಾಳ ಸರ್ಕಾರದ ವಿರುದ್ಧ ಕಿಡಿಕಾರಿದ್ಯಾಕೆ?
ಸೋಮವಾರ, 20 ಆಗಸ್ಟ್ 2018 (14:10 IST)
ಕೋಲ್ಕತ್ತಾ : ಪಠ್ಯ ಪುಸ್ತಕದಲ್ಲಿ ಬಳಸಿದ ಫೋಟೊವೊಂದರ ಕುರಿತು ಇದೀಗ ಬಾಲಿವುಡ್ ನಟ ಫರ್ಹಾನ್ ಅಖ್ತರ್ ಪಶ್ಚಿಮ ಬಂಗಾಳದ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಹೌದು, ಪಠ್ಯ ಪುಸ್ತಕವೊಂದರಲ್ಲಿ ಅಥ್ಲೇಟ್ ಮಿಲ್ಖಾ ಸಿಂಗ್ ಸಾಧನೆಗಳ ಕುರಿತು ವಿವರಿಸಲಾಗಿದೆ. ಆದರೆ ಮಿಲ್ಖಾ ಸಿಂಗ್ ಚಿತ್ರದ ಬದಲು 2013ರಲ್ಲಿ ತೆರೆ ಕಂಡ `ಭಾಗ್ ಮಿಲ್ಖಾ ಭಾಗ್' ಚಿತ್ರದ ನಾಯಕ ಫರ್ಹಾನ್ ಅಖ್ತರ್ ಪೋಸ್ಟರ್ ನ್ನು ಪಠ್ಯದಲ್ಲಿ ಬಳಸಿದ್ದಾರೆ.
ಈ ವಿಷಯ ತಿಳಿದ ನಟ ಫರ್ಹಾನ್ ಅಖ್ತರ್ ಇದನ್ನು ತೀವ್ರವಾಗಿ ಖಂಡಿಸಿದ್ದು, ಕೂಡಲೇ ಪಶ್ಚಿಮ ಬಂಗಾಳದ ಶಿಕ್ಷಣ ಇಲಾಖೆಗೆ ಟ್ವೀಟ್ ಮಾಡಿ, “ವಿದ್ಯಾರ್ಥಿಗಳ ಓದುವ ಪಠ್ಯದಲ್ಲಿ ಬಹಳ ದೊಡ್ಡ ತಪ್ಪು ಮಾಡಿದ್ದೀರಿ. ಇದನ್ನು ಕೂಡಲೇ ಸರಿಪಡಿಸಿ ಅಥ್ಲೇಟಿಕ್ ಲೆಜೆಂಡ್ ಮಿಲ್ಖಾ ಸಿಂಗ್ ಅವರ ಫೋಟೋವನ್ನು ಬಳಸಬೇಕು. ವಿದ್ಯಾರ್ಥಿಗಳ ಪುಸ್ತಕಗಳನ್ನು ಕೂಡಲೇ ಬದಲಿಸಿ” ಎಂದು ಆಗ್ರಹಿಸಿದ್ದಾರೆ. ಹಾಗೇ ಈ ಟ್ವೀಟ್ನ್ನು ಟಿಎಂಸಿ ನಾಯಕ ಡೆರೆಕ್ ಒ'ಬ್ರೇನ್ಗೆ ಟ್ಯಾಗ್ ಮಾಡಿದ್ದು, ಈ ಟ್ವೀಟ್ಗೆ ಪ್ರತಿಕ್ರಿಯೆ ನೀಡಿದ ಅವರು , ಈ ಮಾಹಿತಿಯನ್ನು ಗಮನಕ್ಕೆ ತಂದಿದ್ದಕ್ಕೆ ಧನ್ಯವಾದ ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ