‌ಡಿಸ್ಚಾರ್ಜ್ ಆಗಿರುವ ನಟ ಸೈಫ್‌ ಅಲಿ ಖಾನ್‌ಗೆ ವೈದ್ಯರು ಹಾಕಿದ ಕಂಡೀಷನ್ ಹೀಗಿದೆ

Sampriya

ಮಂಗಳವಾರ, 21 ಜನವರಿ 2025 (15:39 IST)
Photo Courtesy X
ಚಾಕು ಇರಿತಕ್ಕೊಳಗಾಗಿ ಕಳೆದ 6 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ಇಂದು ನಟ ಸೈಫ್ ಅಲಿ ಖಾನ್ ಅವರು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದರು.   ಮುಂಬೈನ ಲೀಲಾವತಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆ ಕಡೆ ತೆರಳಿದ್ದಾರೆ. ಡಿಸ್ಚಾರ್ಜ್ ಫಾರ್ಮಾಲಿಟಿಗಳನ್ನು ಮುಗಿಸಿ, ಇದೀಗ ನಟ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ.

ಸೈಫ್ ತಾಯಿ ಶರ್ಮಿಳಾ ಟ್ಯಾಗೋರ್ ಅವರೊಂದಿಗೆ ಇದ್ದಾರೆ. ಡಿಸ್ಚಾರ್ಜ್‌ ಆಗಿರುವ ಸೈಫ್‌ಗೆ ಒಂದು ವಾರದವರೆಗೆ ಸಂಪೂರ್ಣ ಬೆಡ್ ರೆಸ್ಟ್ ಅನ್ನು ವೈದ್ಯರು ಸೂಚಿಸಿದ್ದಾರೆ. ಅದಲ್ಲದೆ ಸೋಂಕು ತಗಲುವ ಹಿನ್ನೆಲೆ ಹೊರಗಿನವರನ್ನು ಯಾರನ್ನು ಭೇಟಿ ಮಾಡದಂತೆ ಸೂಚಿಸಿದ್ದಾರೆ.

ಇನ್ನೂ ನಟ ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗುವ ಸುದ್ದಿ ತಿಳಿದು ಆಸ್ಪತ್ರೆ ಹಾಗೂ ಅವರ ಮನೆ ಸುತ್ತಾ ಜನರು ಜಮಾಯಿಸಿದ್ದಾರೆ. ಈ ಹಿನ್ನೆಲೆ ಭಾರೀ ಭದ್ರತೆಯನ್ನು ನೀಡಲಾಗಿದೆ.  

ದರೋಡೆ ಮಾಡಲು  ಮನೆಗೆ ನುಗ್ಗಿದ್ದ ದುಷ್ಕರ್ಮಿ ನಟ ಸೈಫ್ ಮೇಲೆ ಚಾಕುವಿನಿಂದ ಗಂಭೀರ ದಾಳಿ ಮಾಡಿದ್ದಾನೆ. ಸತತ 4ಗಂಟೆಗಳ ಶಸ್ತ್ರಚಿಕಿತ್ಸೆ ಬಳಿಕ ನಟ ಬೆನ್ನು ಮೂಲೆಯೊಳಗೆ ಹೊಕ್ಕಿದ್ದ 2.5ಇಂಚಿನ ಚಾಕುವನ್ನು ವೈದ್ಯರು ಯಶಸ್ವಿಯಾಗಿ ಹೊರತೆಗೆದಿದ್ದರು. ನಟನು ತನ್ನ ತೋಳು ಮತ್ತು ಕುತ್ತಿಗೆಗೆ ಗಾಯಗಳಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡನು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ