ಕಾಂಗ್ರೆಸ್ ಆರೋಪಕ್ಕೆ ಸಿಡಿದೆದ್ದ ನಟಿ ಪ್ರೀತಿ ಜಿಂಟಾ, ಕೇರಳ ಕೈ ಪಾಳಯಕ್ಕೆ ಭಾರೀ ಮುಜುಗರ

Sampriya

ಮಂಗಳವಾರ, 25 ಫೆಬ್ರವರಿ 2025 (18:45 IST)
Photo Courtesy X
ನವದೆಹಲಿ: ಟ್ವೀಟ್‌ ಮೂಲಕ ನಟಿ ಪ್ರೀತಿ ಜಿಂಟಾ ವಿರುದ್ಧ ಗಂಭೀರ ಆರೋಪ ಮಾಡಿದ್ದ ಕಾಂಗ್ರೆಸ್ ಮೇಲೆ  ನಟಿ ಗರಂ ಆಗಿ ತಿರುಗೇಟು ನೀಡಿದ್ದಾರೆ.

ಕಾಂಗ್ರೆಸ್‌ ಪಕ್ಷವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡ ನಟಿ ಪ್ರೀತಿ ಜಿಂಟಾ ಅವರು, 'ಕಾಂಗ್ರೆಸ್‌ ಪಕ್ಷವು ನನ್ನ ವಿರುದ್ಧ ಸುಳ್ಳು ಸುದ್ದಿಯನ್ನು ವೈರಲ್ ಮಾಡುತ್ತಿದೆ. ಬರೋಬ್ಬರಿ 18 ಕೋಟಿ ರೂಪಾಯಿ ಸಾಲದ ವಿಚಾರಕ್ಕೆ ಸಂಬಂಧಿಸಿದಂತೆ ವಾದ - ವಿವಾದ ನಡೆಯುತ್ತಿದೆ. ಸೋಷಿಯಲ್‌ ಮೀಡಿಯಾ ಖಾತೆ ಸಂಬಂಧಿಸಿದಂತೆ ನಡೆಯುತ್ತಿರುವ ಚರ್ಚೆಯ ವಿಷಯದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ತೀವ್ರ ಮುಜುಗರವಾಗಿದೆ.

ಸಿನಿಮಾ ಹಾಗೂ ಉದ್ಯಮದಲ್ಲಿ ತೊಡಗಿಕೊಂಡಿರುವ ಪ್ರೀತಿ ಜಿಂಟಾ ಅವರು ಇದುವರೆಗೆ ಯಾವುದು ಪಕ್ಷದಲ್ಲಿ ಗುರುತಿಸಿಕೊಂಡಿಲ್ಲ. ಆದರೆ ಕಾಂಗ್ರೆಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿ, ಪ್ರೀತಿ ಅವರು ನ್ಯೂ ಇಂಡಿಯಾ ಕೋ ಆಪರೇಟಿವ್ ಬ್ಯಾಂಕಿನಿಂದ ಬರೋಬ್ಬರಿ 18 ಕೋಟಿ ರೂಪಾಯಿ ಸಾಲ ಪಡೆದಿದ್ದಾರೆ. ಪ್ರೀತಿ ಅವರು ತಮ್ಮ ಸಾಮಾಜಿಕ ಮಾಧ್ಯಮದ ಖಾತೆಗಳನ್ನು ಬಿಜೆಪಿಗೆ ನೀಡಿದ್ದಾರೆ.

ಈ ಮೂಲಕ ಬ್ಯಾಂಕ್‌ ಸಾಲವನ್ನು ಮನ್ನಾ ಮಾಡಿಸಿಕೊಂಡಿದ್ದಾರೆ ಎಂದು ಪೋಸ್ಟ್ ಹಾಕಿತ್ತು.  ಅದಲ್ಲದೆ ಪ್ರೀತಿ ಜಿಂಟಾ ಬಿಜೆಪಿ ಪರ ಕೆಲಸ ಮಾಡುತ್ತಿದ್ದಾರೆ. ಇದಕ್ಕಾಗಿ ಅವರು ಕಮಿಷನ್‌ ಸಹ ತೆಗೆದುಕೊಂಡಿದ್ದಾರೆ ಎಂದು ಆರೋಪ ಮಾಡಿದ್ದು. ಪ್ರೀತಿ ಅವರು ಈ ವಿಷಯದ ವಿರುದ್ಧ ಸಿಡಿದೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ