ಚಿತ್ರರಂಗದ ಕಾರ್ಮಿಕರಿಗಾಗಿ 51 ಲಕ್ಷ ದಾನ ಮಾಡಿದ ಬಾಲಿವುಡ್ ನಟ ಅಜಯ್ ದೇವಗನ್

ಗುರುವಾರ, 2 ಏಪ್ರಿಲ್ 2020 (10:17 IST)
ಮುಂಬೈ: ಲಾಕ್ ಡೌನ್ ನಿಂದಾಗಿ ಸಂಕಷ್ಟಕ್ಕೀಡಾಗಿರುವ ಚಿತ್ರರಂಗದ ಕಾರ್ಮಿಕರ ರಕ್ಷಣೆಗೆ ಈಗ ಸ್ಟಾರ್ ನಟರು ಸಹಾಯ ಹಸ್ತ ಚಾಚುತ್ತಿದ್ದಾರೆ. ಇದೀಗ ಅಜಯ್ ದೇವಗನ್ ಕಾರ್ಮಿಕರಿಗಾಗಿ ಭಾರೀ ದೇಣಿಗೆ ನೀಡಿ ಸುದ್ದಿಯಾಗಿದ್ದಾರೆ.


ಇದಕ್ಕೆ ಮೊದಲು ಬಾಲಿವುಡ್ ನಟ ಸಲ್ಮಾನ್ ಖಾನ್ 25 ಸಾವಿರ ಕಾರ್ಮಿಕರಿಗೆ ನೆರವು ನೀಡಲು ಮುಂದಾಗಿರುವ ಸುದ್ದಿ ಬಂದಿತ್ತು. ಇದೀಗ ಅಜಯ್ ದೇವಗನ್ ಕಾರ್ಮಿಕರ ನೆರವಿಗೆ 51 ಲಕ್ಷ ರೂ. ದೇಣಿಗೆ ಮಾಡಿದ್ದಾರೆ ಎಂಬ ಸುದ್ದಿ ಬಂದಿದೆ.

ಕಾರ್ಮಿಕರ ಸಂಘಕ್ಕೆ 51 ಲಕ್ಷ ರೂ. ದೇಣಿಗೆ ನೀಡಿರುವ ಅಜಯ್ ಅವರ ರಕ್ಷಣೆಗೆ ಬಳಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ. ಇದರಿಂದ ಸುಮಾರು 5 ಲಕ್ಷ ಕಾರ್ಮಿಕರಿಗೆ ನೆರವಾಗಲಿದೆ ಎಂದು ಕಾರ್ಮಿಕರ ಸಂಘದ ಮುಖ್ಯ ಸಲಹೆಗಾರ ಅಶೋಕ್ ಪಂಡಿತ್ ಮಾಹಿತಿ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ