ಕೊರೋನಾ ಹರಡಿದ ಕನಿಕಾ ಕಪೂರ್ ಈಗ ಕಣ್ಣೀರು

ಸೋಮವಾರ, 30 ಮಾರ್ಚ್ 2020 (09:47 IST)
ಮುಂಬೈ: ವಿದೇಶದಿಂದ ಬಂದ ಬಳಿಕ ಸಾಮಾಜಿಕ ಅಂತರ ಕಾಯ್ದುಕೊಳ್ಳದೇ ವಿಐಪಿಗಳಿಗೆ ಪಾರ್ಟಿ ಆಯೋಜಿಸಿ ಕರೋನಾ ಹರಡಲು ಕಾರಣವಾಗಿದ್ದ ಗಾಯಕಿ ಕನಿಕಾ ಕಪೂರ್ ಈಗ ಕಣ್ಣೀರು ಹಾಕುತ್ತಿದ್ದಾರೆ.


ಕೊರೋನಾ ಇದ್ದರೂ ಪಾರ್ಟಿ ಮಾಡಿದ್ದಕ್ಕೆ ಕನಿಕಾ ವ್ಯಾಪಕ ಟೀಕೆಗೆ ಗುರಿಯಾಗಿದ್ದರು. ಸಾಮಾಜಿಕ ಅಂತರ ಕಾಯ್ದುಕೊಳ್ಳದ ಕಾರಣಕ್ಕೆ ಕನಿಕಾ ವಿರುದ್ಧ ಎಫ್ ಐಆರ್ ಕೂಡಾ ದಾಖಲಾಗಿತ್ತು.

ಇದೀಗ ತಮ್ಮ ಸೋಷಿಯಲ್ ಮೀಡಿಯಾ ಪೇಜ್ ನಲ್ಲಿ ಭಾವುಕ ಸಂದೇಶ ಬರೆದುಕೊಂಡಿರುವ ಕನಿಕಾ ಮುಂದಿನ ಪರೀಕ್ಷೆಯಲ್ಲಾದರೂ ಕರೋನಾ ಸೋಂಕು ನೆಗೆಟಿವ್ ಬರಲಿ ಎಂದು ಬೇಡಿಕೊಂಡಿದ್ದಾರೆ. ಅಲ್ಲದೆ, ಕ್ವಾರಂಟೈನ್ ಸಮಯದಲ್ಲಿ ಮಕ್ಕಳನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ನೀವೆಲ್ಲಾ ಮನೆಯಲ್ಲೇ ಇರಿ, ಸೇಫ್ ಆಗಿರಿ’ ಎಂದು ಸಂದೇಶ ಬರೆದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ