ಬಾಲಿವುಡ್ ಆಫರ್ ತಿರಸ್ಕರಿಸಿದ್ದರ ನಿಜ ಕಾರಣ ಬಯಲು ಮಾಡಿದ ರಶ್ಮಿಕಾ ಮಂದಣ್ಣ

ಗುರುವಾರ, 2 ಏಪ್ರಿಲ್ 2020 (09:54 IST)
ಬೆಂಗಳೂರು: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಕೆಲವು ದಿನಗಳ ಹಿಂದೆ ಬಾಲಿವುಡ್ ಆಫರ್ ಒಂದನ್ನು ತಿರಸ್ಕರಿಸಿದ್ದು ಸುದ್ದಿಯಾಗಿತ್ತು. ಆದರೆ ಇದಕ್ಕೆ ನಿಜ ಕಾರಣವೇನೆಂದು ರಶ್ಮಿಕಾ ಬಯಲು ಮಾಡಿದ್ದಾರೆ.


ತೆಲುಗಿನ ಜೆರ್ಸಿ ಸಿನಿಮಾ ಬಾಲಿವುಡ್ ಗೆ ರಿಮೇಕ್ ಆಗುತ್ತಿದ್ದಕ್ಕೆ ಈ ಸಿನಿಮಾ ಮೂಲಕ ರಶ್ಮಿಕಾ ಬಾಲಿವುಡ್ ಗೆ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿಯಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ರಶ್ಮಿಕಾ ಈ ಆಫರ್ ತಿರಸ್ಕರಿಸಿದ್ದಾರೆ ಎಂಬ ಸುದ್ದಿಬಂದಿತ್ತು.

ಇತ್ತೀಚೆಗಿನ ಸಂದರ್ಶನವೊಂದರಲ್ಲಿ ರಶ್ಮಿಕಾ ಈ ಬಗ್ಗೆ ಮಾತನಾಡಿದ್ದು ಆ ಪಾತ್ರವನ್ನು ನನಗೆ ಮಾಡಲು ಸಾಧ್ಯವಿಲ್ಲವೆನಿಸಿತು. ಚಿತ್ರತಂಡ ನನಗಿಂತ ಯೋಗ್ಯ ನಟಿಯನ್ನು ಆರಿಸಿದರೆ ಆ ಪಾತ್ರಕ್ಕೆ ನ್ಯಾಯ ಒದಗಿಸಲು ಸಾಧ್ಯವೆನಿಸಿತು. ನನಗೆ ಮಾಡಲು ಕಷ್ಟ ಎನಿಸುವ ಪಾತ್ರವನ್ನು ನಾನು ಒಪ್ಪಿಕೊಳ್ಳಲ್ಲ. ಹೀಗಾಗಿಯೇ ಈ ಚಿತ್ರದಿಂದ ಹೊರಬಂದೆ ಎಂದು ರಶ್ಮಿಕಾ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ