1 ಲಕ್ಷ ಕಾರ್ಮಿಕರ ಮನೆಗೆ ತಿಂಗಳ ದಿನಸಿ ಒದಗಿಸಲಿರುವ ಅಮಿತಾಭ್ ಬಚ್ಚನ್

ಸೋಮವಾರ, 6 ಏಪ್ರಿಲ್ 2020 (10:07 IST)
ಮುಂಬೈ: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಕೊರೋನಾವೈರಸ್ ನಿಂದಾಗಿ ನಿತ್ಯದ ಕೂಳಿಗಾಗಿ ಪರದಾಡುತ್ತಿರುವ 1 ಲಕ್ಷ ಸಿನಿ ಕಾರ್ಮಿಕರ ಕುಟುಂಬಗಳಿಗೆ ರೇಷನ್ ಒದಗಿಸಲು ತೀರ್ಮಾನಿಸಿದ್ದಾರೆ.


ಲಾಕ್ ಡೌನ್ ನಿಂದಾಗಿ ಚಿತ್ರೀಕರಣ ನಡೆಯುತ್ತಿಲ್ಲ. ಹೀಗಾಗಿ ದಿನಗೂಲಿಗಾಗಿ ದುಡಿಯುವ ಸಿನಿ ಕಾರ್ಮಿಕರ ಬದುಕು ಅತಂತ್ರವಾಗಿದೆ. ಹೀಗಾಗಿ ಇವರ ನೆರವಿಗೆ ಬರಲು ಬಿಗ್ ಬಿ ತೀರ್ಮಾನಿಸಿದ್ದಾರೆ.

ಬಿಗ್ ಬಿ ನಡೆಗೆ ಅವರು ರಾಯಭಾರಿಯಾಗಿರುವ ಕಲ್ಯಾಣ್ ಜ್ಯುವೆಲ್ಲರ್ಸ್ ಮತ್ತು ಸೋನಿ ಪಿಕ್ಚರ್ಸ್ ನೆಟ್ ವರ್ಕ್ ಸಂಸ‍್ಥೆ ಕೂಡಾ ಕೈ ಜೋಡಿಸಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ