ರಣಬೀರ್-ರಶ್ಮಿಕಾ ಅಭಿನಯದ ಅನಿಮಲ್ ಟೀಸರ್ ರಿಲೀಸ್: ಸೌತ್ ಸಿನಿಮಾ ಶೈಲಿ ನೆನಪಿಸಿದ ಟೀಸರ್

ಗುರುವಾರ, 28 ಸೆಪ್ಟಂಬರ್ 2023 (16:50 IST)
ಮುಂಬೈ: ರಣಬೀರ್ ಕಪೂರ್ ನಾಯಕರಾಗಿರುವ ರಶ್ಮಿಕಾ ಮಂದಣ್ಣ ನಾಯಕಿಯಾಗಿರುವ ಅನಿಮಲ್ ಸಿನಿಮಾದ ಟೀಸರ್ ಇಂದು ಬಿಡುಗಡೆಯಾಗಿದೆ.

ರಣಬೀರ್ ಕಪೂರ್ ಜನ್ಮದಿನಕ್ಕೆ ಅಭಿಮಾನಿಗಳಿಗೆ ಉಡುಗೊರೆಯಾಗಿ ಟೀಸರ್ ಬಿಡುಗಡೆ ಮಾಡಲಾಗಿದೆ. ಟೀಸರ್ ನೋಡಿದರೆ ಇದು ಲವ್ ಕಮ್ ಪಕ್ಕಾ ಆಕ್ಷನ್ ಸಿನಿಮಾ ಎನ್ನುವುದು ಕನ್ ಫರ್ಮ್ ಆಗುತ್ತದೆ. ಚಿತ್ರದಲ್ಲಿ ಅನಿಲ್ ಕಪೂರ್ ನಾಯಕನ ತಂದೆ ಪಾತ್ರದಲ್ಲಿ ಖಡಕ್ ಆಗಿ ಅಭಿನಯಿಸಿದ್ದಾರೆ.

ಈ ಸಿನಿಮಾದ ಆಕ್ಷನ್ ಸೀಕ್ವೆನ್ಸ್ ಗಳನ್ನು ನೋಡಿದರೆ ಸೌತ್ ಸಿನಿಮಾಗಳನ್ನು ಹೋಲುತ್ತಿದೆ. ಇತ್ತೀಚೆಗೆ ಬಾಲಿವುಡ್ಡಿಗರು ಸೌತ್ ಸಿನಿಮಾ ಮೇಕಿಂಗ್ ಶೈಲಿಯನ್ನು ಅಳವಡಿಸಿಕೊಂಡು ಸಕ್ಸಸ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಅನಿಮಲ್ ನಲ್ಲೂ ಅದೇ ಫಾರ್ಮುಲಾ ಅಳವಡಿಸಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ