ಕಿಂಗ್ ಕೊಹ್ಲಿ ಆರ್ ಸಿಬಿ ತಂಡ ಸೇರಿಕೊಳ್ಳುವುದು ಯಾವಾಗ? ಇಲ್ಲಿದೆ ಉತ್ತರ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ಫಾ ಡು ಪ್ಲೆಸಿಸ್, ದಿನೇಶ್ ಕಾರ್ತಿಕ್, ಕೋಚಿಂಗ್ ಸ್ಟಾಫ್ ಈಗಾಗಲೇ ತಂಡವನ್ನು ಕೂಡಿಕೊಂಡಿದ್ದಾರೆ. ಇದೀಗ ಆರ್ ಸಿಬಿ ಫ್ಯಾನ್ಸ್ ಕಿಂಗ್ ಕೊಹ್ಲಿ ಆಗಮನಕ್ಕೆ ಕಾಯುತ್ತಿದ್ದಾರೆ.
ಆರ್ ಸಿಬಿ ಏಪ್ರಿಲ್ 2 ರಂದು ಬೆಂಗಳೂರಿನಲ್ಲಿ ಮೊದಲ ಪಂದ್ಯವಾಡಲಿದೆ. ಸದ್ಯಕ್ಕೆ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಸರಣಿ ಮುಗಿಸಿ ಮುಂಬೈಗೆ ಮರಳಿದ್ದು, ಮಾರ್ಚ್ 26 ರಂದು ಆರ್ ಸಿಬಿ ಪಾಳಯ ಸೇರಿಕೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.