ವಾಸ್ತವ್ಯಕ್ಕೆ ಲಂಡನ್, ಕೆಲಸಕ್ಕಾಗಿ ಕೊಹ್ಲಿ, ಮಕ್ಕಳನ್ನೂ ಬಿಟ್ಟು ಮುಂಬೈಗೆ ಬಂದ ಅನುಷ್ಕಾ ಶರ್ಮಾ

Krishnaveni K

ಬುಧವಾರ, 4 ಸೆಪ್ಟಂಬರ್ 2024 (11:19 IST)
ಮುಂಬೈ: ಪತಿ ವಿರಾಟ್ ಕೊಹ್ಲಿ ಮಕ್ಕಳನ್ನು ಲಂಡನ್ ನಲ್ಲಿಯೇ ಬಿಟ್ಟು ಅನುಷ್ಕಾ ಶರ್ಮಾ ಭಾರತಕ್ಕೆ ಬಂದಿಳಿದಿದ್ದಾರೆ. ವೃತ್ತಿ ಸಂಬಂಧವಾದ ಕೆಲಸಕ್ಕಾಗಿ ಅನುಷ್ಕಾ ಮುಂಬೈಗೆ ಬಂದಿದ್ದಾರೆ ಎನ್ನಲಾಗಿದೆ.

ಅಕಾಯ್ ಜನನದ ಬಳಿಕ ಅನುಷ್ಕಾ ಹೆಚ್ಚು ಕಡಿಮೆ ಲಂಡನ್ ನಲ್ಲಿಯೇ ಉಳಿದುಕೊಂಡಿದ್ದಾರೆ. ಕೊಹ್ಲಿ ಕೂಡಾ ಕೇವಲ ಕ್ರಿಕೆಟ್ ಸರಣಿಗಳಿಗಾಗಿ ಮಾತ್ರ ಭಾರತ ಅಥವಾ ಬೇರೆ ದೇಶಕ್ಕೆ ಹೋಗುತ್ತಾರೆ. ಉಳಿದಂತೆ ಲಂಡನ್ ನಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಇಬ್ಬರೂ ಮುಂದೆ ಅಲ್ಲಿಯೇ ಸೆಟಲ್ ಆಗಲಿದ್ದಾರೆ ಎಂಬ ಮಾತಿದೆ.

ಇದೀಗ ಅನುಷ್ಕಾ ಎರಡನೇ ಮಗುವಾದ ಬಳಿಕ ಎರಡನೇ ಬಾರಿಗೆ ಭಾರತಕ್ಕೆ ಬಂದಿಳಿದಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಕಪ್ಪು ಬಣ್ಣದ ದಿರಿಸಿನಲ್ಲಿ ಬಂದಿಳಿದ ಅನುಷ್ಕಾ ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ. ತಾವು ರಾಯಭಾರಿಯಾಗಿರುವ ಬ್ರ್ಯಾಂಡ್ ನ ಪ್ರಮೋಷನಲ್ ಕಾರ್ಯಕ್ರಮದಲ್ಲಿ ಭಾಗಿಯಾಗಲು ಅನುಷ್ಕಾ ಭಾರತಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಉಳಿದಂತೆ ಸಂಪೂರ್ಣ ಸಮಯವನ್ನು ಲಂಡನ್ ನಲ್ಲಿಯೇ ಕೊಹ್ಲಿ ದಂಪತಿ ಕಳೆಯುತ್ತಿದ್ದಾರೆ. ಕೊಹ್ಲಿ ಮುಂದೆ ಬ್ರಿಟನ್ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಲಿದ್ದಾರೆ ಎಂಬ ಮಾತುಗಳೂ ಇವೆ. ಇದಕ್ಕೆ ಕೆಲವರು ಕೊಂಕು ಮಾತನಾಡಿದ್ದು ಕೆಲಸಕ್ಕೆ ಭಾರತ ಬೇಕು, ಉಳಿದುಕೊಳ್ಳಲು ವಿದೇಶ ಬೇಕು ಎನ್ನುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ