CEAT ವರ್ಷದ ಕ್ರಿಕೆಟಿಗ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಏಕದಿನ ಬ್ಯಾಟರ್: ಪ್ರಶಸ್ತಿ ಪಡೆದವರ ಲಿಸ್ಟ್ ಇಲ್ಲಿದೆ

Krishnaveni K

ಗುರುವಾರ, 22 ಆಗಸ್ಟ್ 2024 (09:52 IST)
Photo Credit: Facebook
ಮುಂಬೈ: ಪ್ರಮುಖ ಟಯರ್ ತಯಾರಿಕಾ ಸಂಸ್ಥೆ CEAT ನೀಡುವ ಕ್ರಿಕೆಟ್ ಪ್ರಶಸ್ತಿ ಘೋಷಣೆಯಾಗಿದ್ದು ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ವರ್ಷದ ಕ್ರಿಕೆಟಿಗ ಮತ್ತು ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟಿಗ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ರೋಹಿತ್ ಶರ್ಮಾ ಈ ಸಾಲಿನಲ್ಲಿ ಏಕದಿನ ವಿಶ್ವಕಪ್ ಫೈನಲ್, ಟಿ20 ವಿಶ್ವಕಪ್ ಚಾಂಪಿಯನ್ ಶಿಪ್ ಗೆದ್ದ ಭಾರತ ತಂಡದ ನಾಯಕರಾಗಿದ್ದು ಯಶಸ್ವಿಯಾಗಿ ತಂಡವನ್ನು ಮುನ್ನಡೆಸಿದ ಹೆಗ್ಗಳಿಕೆ ಹೊಂದಿದ್ದಾರೆ. ಅಲ್ಲದೆ, ತಾವೂ ಬ್ಯಾಟಿಂಗ್ ನಲ್ಲಿ ತಂಡಕ್ಕೆ ಪ್ರಮುಖ ಕೊಡುಗೆಯನ್ನು ನೀಡಿದ್ದಾರೆ. ಈ ಕಾರಣಕ್ಕೆ ಅವರಿಗೆ ವರ್ಷದ ಕ್ರಿಕೆಟಿಗ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ಇನ್ನು, ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ಏಕದಿನ ಬ್ಯಾಟರ್ ಪ್ರಶಸ್ತಿ, ಇಂಗ್ಲೆಂಡ್ ಫಿಲ್ ಸಾಲ್ಟ್ ಗೆಟಿ20 ಬ್ಯಾಟರ್, ಭಾರತದ ಯುವ ಆರಂಭಿಕ ಯಶಸ್ವಿ ಜೈಸ್ವಾಲ್ ಗೆ ಟೆಸ್ಟ್ ಬ್ಯಾಟಿಗ ಪ್ರಶಸ್ತಿ ನೀಡಲಾಗಿದೆ. ಭಾರತ ತಂಡದ ಯಶಸ್ವೀ ಕೋಚ್ ಆಗಿ ನಿರ್ಗಮಿಸಿದ್ದ ವಾಲ್ ರಾಹುಲ್ ದ್ರಾವಿಡ್ ಗೆ ಜೀವಮಾನ ಶ್ರೇಷ್ಠ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಉಳಿದಂತೆ ಪ್ರಶಸ್ತಿ ವಿಜೇತರ ಕಂಪ್ಲೀಟ್ ಲಿಸ್ಟ್ ಇಲ್ಲಿದೆ ನೋಡಿ.

ಜೀವಮಾನ ಶ್ರೇಷ್ಠ ಸಾಧನೆ: ರಾಹುಲ್ ದ್ರಾವಿಡ್
ವರ್ಷದ ಕ್ರಿಕೆಟಿಗ: ರೋಹಿತ್ ಶರ್ಮಾ
ಟೆಸ್ಟ್ ಬ್ಯಾಟರ್: ಯಶಸ್ವಿ ಜೈಸ್ವಾಲ್
ಟೆಸ್ಟ್ ಬೌಲರ್: ರವಿಚಂದ್ರನ್ ಅಶ್ವಿನ್
ಏಕದಿನ ಬ್ಯಾಟರ್: ವಿರಾಟ್ ಕೊಹ್ಲಿ
ಏಕದಿನ ಬೌಲರ್: ಮೊಹಮ್ಮದ್ ಶಮಿ
ಟಿ20 ಬ್ಯಾಟರ್: ಫಿಲ್ ಸಾಲ್ಟ್
ಟಿ20 ಬೌಲರ್: ಟಿಮ್ ಸೌಥಿ
ವರ್ಷದ ದೇಶೀಯ ಕ್ರಿಕೆಟಿಗ: ಸಾಯಿ ಕಿಶೋರ್
ವರ್ಷದ ಮಹಿಳಾ ಬ್ಯಾಟರ್: ಸ್ಮೃತಿ ಮಂಧಾನಾ
ವರ್ಷದ ಮಹಿಳಾ ಬೌಲರ್: ದೀಪ್ತಿ ಶರ್ಮಾ
ಹೆಚ್ಚು ಟಿ20 ಪಂದ್ಯಗಳನ್ನಾಡಿದ ಮಹಿಳಾ ನಾಯಕಿ: ಹರ್ಮನ್ ಪ್ರೀತ್ ಕೌರ್
ಐಪಿಎಲ್ ನ ಅತ್ಯುತ್ತಮ ನಾಯಕ: ಶ್ರೇಯಸ್ ಅಯ್ಯರ್
ಮಹಿಳಾ ಟೆಸ್ಟ್ ನಲ್ಲಿ ವೇಗದ ದ್ವಿಶತಕ ಭಾರಿಸಿದ ಬ್ಯಾಟರ್: ಶಫಾಲಿ ವರ್ಮ
ಶ್ರೇಷ್ಠ ಕ್ರಿಕೆಟ್ ಆಡಳಿತಗಾರ: ಜಯ್ ಶಾ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ