ವಮಿಕಾ ಜೊತೆ ಕ್ಯೂಟ್ ಆಗಿ ನವರಾತ್ರಿಗೆ ವಿಶ್ ಮಾಡಿದ ಅನುಷ್ಕಾ ಶರ್ಮಾ

ಗುರುವಾರ, 14 ಅಕ್ಟೋಬರ್ 2021 (09:01 IST)
ಮುಂಬೈ: ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ದಂಪತಿಯ ಪುತ್ರಿ ವಮಿಕಾ ಮುಖದರ್ಶನ ಇನ್ನೂ ಅಭಿಮಾನಿಗಳಿಗೆ ಆಗಿಲ್ಲ. ಜನವರಿಗೆ ಒಂದು ವರ್ಷ ಪೂರೈಸುವ ವಮಿಕಾ ಈಗ ಅಮ್ಮನ ಜೊತೆ ನವರಾತ್ರಿ ಹಬ್ಬಕ್ಕೆ ಶುಭ ಹಾರೈಸಿದ್ದಾರೆ.


ಅನುಷ್ಕಾ ಮುದ್ದಿನ ಮಗಳು ವಮಿಕಾ ಜೊತೆಗಿರುವ ಫೋಟೋವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದು, ದುರ್ಗಾಷ್ಟಮಿಯ ಶುಭಾಶಯಗಳು ಎಂದಿದ್ದಾರೆ.

ಆದರೆ ಈ ಫೋಟೋದಲ್ಲೂ ವಮಿಕಾ ಮುಖ ದರ್ಶನವಾಗಿಲ್ಲ. ಆದರೆ ಕೊಹ್ಲಿ ಪುತ್ರಿ ಅಮ್ಮನ ಜೊತೆಗಿನ ಮುದ್ದಾದ ಕ್ಷಣ ನೆಟ್ಟಿಗರ ಮನಸೂರೆಗೊಂಡಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ