ಮಾಜಿ ಪ್ರಧಾನಿ ವಾಜಪೇಯಿ ಜೀವನಾಧರಿತ ಸಿನಿಮಾ ಶೀಘ್ರದಲ್ಲೇ ತೆರೆಗೆ

ಬುಧವಾರ, 28 ಆಗಸ್ಟ್ 2019 (09:34 IST)
ನವದೆಹಲಿ: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಜೀವನಾಧಾರಿತ ಸಿನಿಮಾ ಹೊರಬರಲಿದೆ.ಬಿಜೆಪಿಯ ಮುತ್ಸುದ್ದಿ ನಾಯಕನ ಜೀವನದ ಇಂಟ್ರೆಸ್ಟಿಂಗ್ ಕತೆ ಬೆಳ್ಳಿತೆರೆಯಲ್ಲಿ ಮೂಡಿಬರಲಿದೆ.


ಅಮಾಶ್ ಫಿಲ್ಮ್ಸ್ ನ ಶಿವ ಶರ್ಮಾ ಮತ್ತು ಝೀಶಾನ್ ಅಹಮ್ಮದ್ ಅವರು ಉಲ್ಲೇಖ್ ಎನ್ ಪಿ ಬರೆದ  ದಿ ಅನ್ ಟೋಲ್ಡ್ ವಾಜಪೇಯಿ ಎಂಬ ಪುಸ್ತಕದ ಹಕ್ಕು ಪಡೆದುಕೊಂಡಿದ್ದು, ವಾಜಪೇಯಿ ಜೀವನಾಧಾರಿತ ಸಿನಿಮಾ ಮಾಡಲಿದ್ದಾರೆ.

ಈಗಾಗಲೇ ಸ್ಕ್ರಿಪ್ಟ್ ಕೆಲಸ ಶುರುವಾಗಿದೆ. ಸದ್ಯದಲ್ಲೇ ನಿರ್ದೇಶಕರು ಮತ್ತು ಪಾತ್ರ ವರ್ಗದ ಬಗ್ಗೆ ಅಂತಿಮ ತೀರ್ಮಾನ ಮಾಡುವುದಾಗಿ ಅಹಮ್ಮದ್ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ