87 ರ ವಯಸ್ಸಿನಲ್ಲಿ ಸಹ ನಟಿ ಶಬಾನ ಅಜ್ಮಿಗೆ ಲಿಪ್ ಲಾಕ್ ಮಾಡಿದ ಧರ್ಮೇಂದ್ರ

ಸೋಮವಾರ, 31 ಜುಲೈ 2023 (09:00 IST)
Photo Courtesy: Twitter
ಮುಂಬೈ: ಇತ್ತೀಚೆಗೆ ಸಿನಿಮಾಗಳಲ್ಲಿ ಲಿಪ್ ಲಾಕ್ ದೃಶ್ಯಗಳೇನೂ ಹೊಸದಲ್ಲ. ಆದರೆ ಈ ಲಿಪ್ ಲಾಕ್ ದೃಶ್ಯ ಮಾತ್ರ ಭಾರೀ ಸದ್ದು ಮಾಡಿದೆ.

ಇದಕ್ಕೆ ಕಾರಣ ಹಳೇ ಹೀರೋ ಧರ್ಮೇಂದ್ರ ತಮ್ಮ 87 ನೇ ವಯಸ್ಸಿನಲ್ಲಿ ಸಹ ನಟಿ 72 ವರ್ಷದ ಶಬಾನ ಅಜ್ಮಿಗೆ ಲಿಪ್ ಲಾಕ್ ಮಾಡಿ ಸುದ್ದಿಯಾಗಿದ್ದಾರೆ. ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಎನ್ನುವ ಸಿನಿಮಾದಲ್ಲಿ ಸಹನಟಿಯಾಗಿರುವ ಶಬಾನಗೆ ಧರ್ಮೇಂದ್ರ ಲಿಪ್ ಲಾಕ್ ಮಾಡಿದ್ದಾರೆ.

ಈ ದೃಶ್ಯದ ಮೂಲಕ ಜನರಿಗೆ ನಾವು ಅಚ್ಚರಿ ನೀಡಿದ್ದೇವೆ. ಜನರು ಇಷ್ಟೊಂದು ಅದ್ಭುತವಾಗಿ ಪ್ರತಿಕ್ರಿಯಿಸುತ್ತಾರೆ ಎಂದುಕೊಂಡಿರಲಿಲ್ಲ ಎಂದಿದ್ದಾರೆ ಧರ್ಮೇಂದ್ರ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ