ಜವಾನ್ ನಲ್ಲಿ ಅತಿಥಿ ಪಾತ್ರ ಮಾಡಲು ದಳಪತಿ ವಿಜಯ್ ಪಡೆದ ಸಂಭಾವನೆ ಎಷ್ಟು?

ಸೋಮವಾರ, 31 ಜುಲೈ 2023 (08:40 IST)
Photo Courtesy: Twitter
ಮುಂಬೈ: ಶಾರುಖ್ ಖಾನ್ ನಾಯಕರಾಗಿರುವ ಜವಾನ್ ಸಿನಿಮಾದಲ್ಲಿ ದಳಪತಿ  ವಿಜಯ್ ಕೂಡಾ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಸಿನಿಮಾವನ್ನು ಸೌತ್ ನಿರ್ದೇಶಕ ಅಟ್ಲೀ ನಿರ್ದೇಶಿಸುತ್ತಿದ್ದು, ದಕ್ಷಿಣದ ಅನೇಕ ನಟರು ಸಿನಿಮಾದಲ್ಲಿದ್ದಾರೆ. ವಿಜಯ್ ಸೇತುಪತಿ ಪ್ರಮುಖ ವಿಲನ್ ಆಗಿದ್ದರೆ ನಾಯಕಿಯಾಗಿ ನಯನತಾರಾ ಅಭಿನಯಿಸಿದ್ದಾರೆ.

ಇನ್ನು ಈ ಸಿನಿಮಾದಲ್ಲಿ ಕೆಲವೇ ನಿಮಿಷ ಬಂದು ಹೋಗುವ ಅತಿಥಿ ಪಾತ್ರದಲ್ಲಿ ಅಭಿನಯಿಸುತ್ತಿರುವ ವಿಜಯ್ ಇದಕ್ಕಾಗಿ ಯಾವುದೇ ಸಂಭಾವನೆ ಇಲ್ಲದೇ ನಟಿಸಿದ್ದಾರಂತೆ. ಅಟ್ಲೀ ಮತ್ತು ಶಾರುಖ್ ಮೇಲಿನ ಪ್ರೀತಿಯಿಂದ ವಿಜಯ್ ಉಚಿತವಾಗಿ ನಟಿಸಲು ತೀರ್ಮಾನಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಇನ್ನು, ನಾಯಕ ನಟ ಶಾರುಖ್ ಈ ಸಿನಿಮಾಗೆ 100 ಕೋಟಿ ರೂ. ಸಂಭಾವನೆ ಪ್ಲಸ್ ಚಿತ್ರದ ಲಾಭದಲ್ಲಿ ಶೇ.60 ರಷ್ಟು ಪಾಲು ಪಡೆದುಕೊಳ್ಳಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ