ಫಿಟ್ ನೆಸ್ ಬಗ್ಗೆ ನಟಿ ಸುಶ್ಮಿತಾ ಸೇನ್ ಹೇಳಿದ್ದೇನು ಗೊತ್ತಾ?
ಸೋಮವಾರ, 20 ಆಗಸ್ಟ್ 2018 (15:05 IST)
ಮುಂಬೈ : ಕೆಲವು ನಟಿಯರು ತಮ್ಮ ಫಿಟ್ ನೆಸ್ ಕಾಪಾಡಿಕೊಳ್ಳಲು ಪರದಾಡುತ್ತಿದ್ದರೆ ಬಾಲಿವುಡ್ ನಟಿ, ಮಾಜಿ ಭುವನ ಸುಂದರಿ ಸುಷ್ಮೀತಾ ಸೇನ್ ಮಾತ್ರ ಫಿಟ್ ನೆಸ್ ಕಾಪಾಡಿಕೊಳ್ಳುವ ವಿಚಾರದ ವಿರುದ್ಧ ಕಿಡಿಕಾರಿದ್ದಾರೆ.
ಹೌದು. ತೂಕ ಹೆಚ್ಚಿಸುವ, ತೂಕ ತಗ್ಗಿಸುವ ವಿಚಾರದ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ನಟಿ ಸುಷ್ಮೀತಾ ಸೇನ್,’ ನಾನು ರಾಷ್ಟ್ರೀಯ ಟೆಲಿವಿಷನ್ ಕಾರ್ಯಕ್ರಮವೊಂದರಲ್ಲಿ ಎಕ್ ಕಿಲಾಡಿ ಎಕ್ ಹಸೀನಾ ಎಂಬ ಕಾರ್ಯಕ್ರದಲ್ಲಿ ಭಾಗವಹಿಸಿದ್ದೆ ಈ ಸಂದರ್ಭ ನನ್ನ ತೂಕ ಹೆಚ್ಚಾಗಿತ್ತು. ಇದು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಯಿತು. ನನ್ನ ತೂಕದ ಬಗ್ಗೆ ಜನರು ಮಾತನಾಡಿದರೂ, ಟೀಕಿಸಿದರು. ನಿಜಕ್ಕೂ ಇದೊಂದು ಅಸಹ್ಯಕರ ವಿಚಾರ ಎಂದಿದ್ದಾರೆ.
ಹಾಗೇ ಒಬ್ಬ ವ್ಯಕ್ತಿಯನ್ನು ಅವರ ದೇಹದ ತೂಕದ ಮೇಲೆ ಹೇಗೆ ನಿರ್ಧರಿಸುತ್ತೀರಿ ಎಂದು ಪ್ರಶ್ನಿಸಿರುವ ಸುಷ್ಮಿತಾ ಸೇನ್, ‘ಜೀವನದಲ್ಲಿ ಏರು ಪೇರುಗಳು ಇದ್ದೆ ಇದೆ. ಯಾವುದು ಶಾಶ್ವತ ಅಲ್ಲ. ಯಾವುದು ಕೂಡ ಪರ್ಫೆಕ್ಟ್ ಆಗಿರುವುದಿಲ್ಲ. ಕೆಲವರಿಗೆ ವಂಶಪಾರಂಪರಿಕ ತೊಂದರೆ ಇದ್ದರೆ ಮತ್ತೆ ಕೆಲವರಿಗೆ ಆರೋಗ್ಯ ಸಮಸ್ಯೆ ಇರಬಹುದು. ಹೀಗಾಗಿ ಅವರನ್ನು ಅವರಿಗೆ ಇಷ್ಟ ಬಂದಂತೆ ಇರಲು ಬಿಟ್ಟು ಬಿಡಿ ಎಂದು ಮನವಿ ಕೂಡ ಮಾಡಿದ್ದಾರೆ .
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ