ಮಾಸ್ಕ್ ಇಲ್ಲದೇ ಸೆಲ್ಫೀ ತೆಗೆದುಕೊಳ್ಳಲು ಬಂದ ಅಭಿಮಾನಿಗೆ ಜಾಹ್ನವಿ ಕಪೂರ್ ಕ್ಲಾಸ್

ಭಾನುವಾರ, 26 ಸೆಪ್ಟಂಬರ್ 2021 (09:06 IST)
ಮುಂಬೈ: ಸೆಲೆಬ್ರಿಟಿಗಳು ಕಂಡ ಕ್ಷಣ ಅಭಿಮಾನಿಗಳು ಸೆಲ್ಫೀ ತೆಗೆಯಲು ಮುತ್ತಿಕೊಳ್ಳುವುದು ಸಹಜ. ಆದರೆ ಬಾಲಿವುಡ್ ನಟಿ ಜಾಹ್ನವಿ ಕಪೂರ್ ಸೆಲ್ಫೀ ತೆಗೆಯಲು ಬಯಸಿದ ಅಭಿಮಾನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.


ಜಿಮ್ ಗೆ ಹೋಗಿದ್ದ ಜಾಹ್ನವಿ ಹೊರಬರುವಾಗ ಆಕೆಯ ಜೊತೆ ಸೆಲ್ಫೀ ತೆಗೆಯಲು ಅಭಿಮಾನಿಗಳು ಮುತ್ತಿಗೆ ಹಾಕಿದ್ದರು. ಈ ವೇಳೆ ಮಾಸ್ಕ್ ಇಲ್ಲದ ಅಭಿಮಾನಿಯನ್ನು ಕಂಡು ಜಾಹ್ನವಿ ಮಾಸ್ಕ್ ಧರಿಸಬೇಕು ಎಂದು ಸಲಹೆ ನೀಡಿದ್ದಾರೆ.

ಕೊರೋನಾದಿಂದಾಗಿ ಸೆಲೆಬ್ರಿಟಿಗಳು ಅಭಿಮಾನಿಗಳನ್ನು ಹತ್ತಿರ ಸೇರಿಸಿಕೊಳ್ಳಲು ಭಯ ಪಡುತ್ತಿದ್ದಾರೆ. ಅದರಲ್ಲೂ ಈ ರೀತಿ ಸುರಕ್ಷತೆ ಮರೆತು ನಡೆದುಕೊಳ್ಳುವುದು ಸೆಲೆಬ್ರಿಟಿಗಳಿಗೆ ತಲೆನೋವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ