ದೀಪಿಕಾ ಪಡುಕೋಣೆ ವಿಶ್ವದ ಟಾಪ್ ಆಟಗಾರ್ತಿಯಾಗುತ್ತಿದ್ದರು: ಪಿ.ವಿ. ಸಿಂಧು ಹೊಗಳಿಕೆ

ಶುಕ್ರವಾರ, 24 ಸೆಪ್ಟಂಬರ್ 2021 (09:55 IST)
ಮುಂಬೈ: ಬಾಲಿವುಡ್ ನಟಿ, ಮಾಜಿ ಬ್ಯಾಡ್ಮಿಂಟನ್ ತಾರೆ ಪ್ರಕಾಶ್ ಪಡುಕೋಣೆ ಪುತ್ರಿ ದೀಪಿಕಾ ಪಡುಕೋಣೆ ಬಗ್ಗೆ ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು ಹೊಗಳಿಕೆಯ ಮಾತನಾಡಿದ್ದಾರೆ.


ದೀಪಿಕಾ ಸ್ನೇಹಿತೆಯಾಗಿರುವ ಸಿಂಧು, ಫ್ರೆಂಡ್ಲೀ ಮ್ಯಾಚ್ ಆಡಿದ್ದರು. ವಿಶ್ವ ಚಾಂಪಿಯನ್ ಶಿಪ್ ಗೆ ತಯಾರಾಗುತ್ತಿರುವ ಸಿಂಧು, ದೀಪಿಕಾ ಜೊತೆ ಬ್ಯಾಡ್ಮಿಂಟನ್ ಆಡಿದ್ದಾರೆ.

ಈ ವಿಡಿಯೋಗಳನ್ನು ಶೇರ್ ಮಾಡಿರುವ ಸಿಂಧು, ಒಂದು ವೇಳೆ ದೀಪಿಕಾ ಗಂಭೀರವಾಗಿ ಬ್ಯಾಡ್ಮಿಂಟನ್ ನನ್ನು ತೆಗೆದುಕೊಂಡಿದ್ದರೆ ಆಕೆ ವಿಶ್ವದ ಟಾಪ್ ಆಟಗಾರ್ತಿಯಾಗುತ್ತಿದ್ದರು ಎಂದು ಹೊಗಳಿದ್ದಾರೆ. ದೀಪಿಕಾ ಯಾವ ವೃತ್ತಿಪರ ಆಟಗಾರ್ತಿಗೂ ಕಮ್ಮಿಯಿಲ್ಲದಂತೇ ತನಗೆ ಪೈಪೋಟಿ ನೀಡಿದ್ದಾರೆ ಎಂದು ಸಿಂಧು ಹೇಳಿದ್ದಾರೆ. ಈ ವಿಡಿಯೋ ಈಗ ವೈರಲ್ ಆಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ