ಬೋಲ್ಡ್ ಆಗಿ ಅಭಿನಯಿಸುವ ಮಹಿಳೆಯರನ್ನು ನೋಡುವ ದೃಷ್ಟಿಯೇ ಬೇರೆ: ಮಲ್ಲಿಕಾ ಶೆರಾವತ್
ಕೇವಲ ಭಾರತ ಮಾತ್ರವಲ್ಲ, ಜಗತ್ತಿನಾದ್ಯಂತ ಹೀಗೆಯೇ. ಮಹಿಳೆಯರು ಬೋಲ್ಡ್ ದೃಶ್ಯಗಳಲ್ಲಿ ಅಭಿನಯಿಸಿದರೆ ಆಕೆಯನ್ನು ನೋಡುವ ದೃಷ್ಟಿಕೋನವೇ ಬೇರೆ. ಆದರೆ ಪುರುಷರಿಗೆ ಯಾರೂ ಕ್ಯಾರೇ ಎನ್ನುವುದಿಲ್ಲ. ಕೆಲವು ಮಾಧ್ಯಮಗಳೂ ಇದೇ ರೀತಿ ನೋಡುತ್ತಿದ್ದವು. ಆದರೆ ಇಂದು ಪರಿಸ್ಥಿತಿ ಕೊಂಚ ಬದಲಾಗಿದೆ. ಮಾಧ್ಯಮಗಳೂ ಇಂತಹ ದೃಶ್ಯಗಳನ್ನು ಬೆಂಬಲಿಸುತ್ತವೆ. ಇದನ್ನು ಕಲೆಯೆಂದೇ ನೋಡುತ್ತಾರೆ ಎಂದು ಮಲ್ಲಿಕಾ ಹೇಳಿಕೊಂಡಿದ್ದಾರೆ.