ತುನಿಷಾ ಹತ್ಯೆ ಬಗ್ಗೆ ಕಂಗನಾ ಭಾವುಕ ಪೋಸ್ಟ್​​​​

ಶುಕ್ರವಾರ, 30 ಡಿಸೆಂಬರ್ 2022 (20:26 IST)
ನಟಿ ತುನಿಷಾ ಶರ್ಮಾ ಆತ್ಮಹತ್ಯೆ ಮಾಡಿಕೊಳ್ಳುವ ಹದಿನೈದು ದಿನ ಮುನ್ನ ಬಾಯ್ ಫ್ರೆಂಡ್ ಶಿಜಾನ್ ಜೊತೆ ಲವ್ ಬ್ರೇಕ್ ಅಪ್ ಮಾಡಿಕೊಂಡಿದ್ದಳು ಎಂದು ಹೇಳಲಾಗಿದೆ. ಈ ಲವ್ ಬ್ರೇಕ್ ಅಪ್​​ಗೆ ಕಾರಣವನ್ನು ಅವನು ಹೇಳಿದ್ದು, ಲವ್ ಜಿಹಾದ್ ಭಯ ಮತ್ತು ಶ್ರದ್ಧಾ ವಾಕರ್ ಕೊಲೆಯಿಂದ ಬೇಸತ್ತು ದೂರವಾಗಿದ್ದೆ ಎಂದಿದ್ದ. ಈ ಪ್ರಕರಣದ ಕುರಿತಾಗಿ ಅನೇಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಬೆನ್ನಲ್ಲೇ ನಟಿ ಕಂಗನಾ ರಣಾವತ್ ಸಹ ಅಸಮಾಧಾನ ಹೊರಹಾಕಿದ್ದಾರೆ. ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಈ ಕುರಿತು ಭಾವುಕ ಪೋಸ್ಟ್​​​ವೊಂದನ್ನು ಬರೆದುಕೊಂಡಿದ್ದಾರೆ. ‘ಮಹಿಳೆ ಎಲ್ಲವನ್ನೂ ನಿಭಾಯಿಸಬಲ್ಲಳು, ಕಳೆದುಕೊಂಡ ಪ್ರೀತಿ, ಮದುವೆ, ಸಂಬಂಧ ಹೀಗೆ ಎಲ್ಲವನ್ನೂ ನಿಭಾಯಿಸಬಹುದು. ಆದರೆ ಅವಳ ಲವ್ ಸ್ಟೋರಿ ಎಂದಿಗೂ ಪ್ರೀತಿಯನ್ನು ಹೊಂದಿಲ್ಲ ಎಂಬ ಅಂಶವನ್ನು ಅವಳು ಎಂದಿಗೂ ನಿಭಾಯಿಸಲು ಸಾಧ್ಯವಿಲ್ಲ. ನಾನು ಗೌರವಾನ್ವಿತ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಲ್ಲಿ ವಿನಂತಿಸುತ್ತೇನೆ. ಕೃಷ್ಣ ದ್ರೌಪದಿಗೆ ಸಹಾಯ ಮಾಡಿದಂತೆ, ನಾವು ನಿಮ್ಮಲ್ಲಿ ಒಪ್ಪಿಗೆ ಇಲ್ಲದ ಬಹುಪತ್ನಿತ್ವ ವಿರುದ್ಧ ಬಲವಾದ ಕಾನೂನು ಮಾಡುತ್ತೀರಿ ಎಂದು ನಿರೀಕ್ಷೆ ಇಟ್ಟಿದ್ದೀವಿ. ಮಹಿಳೆಯರ ಮೇಲೆ ಆ್ಯಸಿಡ್ ದಾಳಿ, ಮಹಿಳೆಯನ್ನು ಅನೇಕ ತುಂಡು ತುಂಡುಗಳಾಗಿ ಕತ್ತರಿಸುವುದು ಇಂತವರಿಗೆ ತಕ್ಷಣ ಮರಣದಂಡನೆ ಶಿಕ್ಷೆ ವಿಧಿಸಬೇಕು’ ಎಂದು ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ