57ನೇ ವಸಂತಕ್ಕೆ ಕಾಲಿಟ್ಟ ಸಲ್ಮಾನ್ ಖಾನ್

ಮಂಗಳವಾರ, 27 ಡಿಸೆಂಬರ್ 2022 (21:33 IST)
ಸಲ್ಮಾನ್ ಖಾನ್ ತಮ್ಮ 57ನೇ ಬರ್ತ್​​ಡೇನ ಭರ್ಜರಿಯಾಗಿ ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳು ಹಲವೆಡೆ ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಿದ್ದಾರೆ. ಸಲ್ಮಾನ್ ಖಾನ್ ಅವರ ಆಪ್ತ ಬಳಗದಲ್ಲೂ ಆಚರಣೆ ಜೋರಾಗಿದೆ. ಸಲ್ಮಾನ್ ಖಾನ್ ಹುಟ್ಟುಹಬ್ಬದ ಹಿನ್ನೆಲೆ ಸೋಶಿಯಲ್ ಮೀಡಿಯಾದಲ್ಲಿ ಸಿನಿಮಾ ನಟ-ನಟಿಯರು ಹಾಗೂ ಅಭಿನಮಾನಿಗಳು ಶುಭಾಶಯಗಳ ಮಳೆ ಸುರಿಸಿದ್ದಾರೆ. ಸಲ್ಮಾನ್ ಖಾನ್ ಅವರಿಗೆ 57 ವರ್ಷ ವಯಸ್ಸು. ಆದರೂ ಯಂಗ್ ಅಂಡ್ ಎನರ್ಜೆಟಿಕ್ ಆಗಿದ್ದಾರೆ. ಸಲ್ಲು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಕಾಮಿಡಿ, ಆ್ಯಕ್ಷನ್, ಡ್ರಾಮಾ ಹೀಗೆ ವಿವಿಧ ಜಾನರ್‌ನಲ್ಲಿ ಸಿನಿಮಾ ಮಾಡಿ, ಎಲ್ಲಾ ರೀತಿಯಲ್ಲಿಯೂ ಯಶಸ್ಸು ಪಡೆದಿರೋ ಸಲ್ಲೂ ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಪ್ರಸಿದ್ದಿಯಾಗಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ