ಪುತ್ರ ತೈಮೂರ್ ಭವಿಷ್ಯದಲ್ಲಿ ಕ್ರಿಕೆಟಿಗನಾಗಬೇಕೆಂದು ಕರೀನಾ ಕಪೂರ್ ಬಯಕೆಯಂತೆ

ಗುರುವಾರ, 8 ಆಗಸ್ಟ್ 2019 (09:05 IST)
ಮುಂಬೈ: ಬಾಲಿವುಡ್ ನಟಿ ಕರೀನಾ ಕಪೂರ್ ಪುತ್ರ ತೈಮೂರ್ ಅಲಿ ಖಾನ್ ಗೆ ಇನ್ನೂ ಮೂರು ವರ್ಷವಷ್ಟೇ. ಆದರೆ ಈಗಾಗಲೇ ತೈಮೂರ್ ಸ್ಟಾರ್ ಆಗಿಬಿಟ್ಟಿದ್ದಾನೆ.


ಎಲ್ಲರಂತೆ ಕರೀನಾ ಕೂಡಾ ತಮ್ಮ ಮಗನ ಭವಿಷ್ಯದ ಬಗ್ಗೆ ಕನಸು ಕಾಣುತ್ತಾರಂತೆ. ಮಗನನ್ನು ಅವನ ತಾತ ಮನ್ಸೂರ್ ಅಲಿ ಖಾನ್ ಪಟೌಡಿಯಂತೆ ಮಹಾನ್ ಕ್ರಿಕೆಟಿಗನಾಗಿ ಮಾಡಬೇಕು ಎಂಬುದು ಕರೀನಾ ಕನಸಂತೆ. ಹಾಗಂತ ರಿಯಾಲಿಟಿ ಶೋ ಒಂದರಲ್ಲಿ ಕರೀನಾ ಬಹಿರಂಗಪಡಿಸಿದ್ದಾರೆ.

ಟೀಂ ಇಂಡಿಯಾ ಕಂಡ ಶ್ರೇಷ್ಠ ನಾಯಕರಲ್ಲಿ ಒಬ್ಬರಾದ ಮನ್ಸೂರ್ ಅಲಿ ಖಾನ್ ಪುತ್ರ ಸೈಫ್ ಅಲಿ ಖಾನ್ ಮತ್ತು ಕರೀನಾ ದಂಪತಿಯ ಪುತ್ರ ತೈಮೂರ್ ತಾತನಂತೆ ಮುಂದೊಂದು ದಿನ ಕ್ರಿಕೆಟ್ ಜಗತ್ತಿನಲ್ಲಿ ಮಿಂಚುತ್ತಾನಾ ಕಾದು ನೋಡಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ