ಬೆತ್ತಲಾಗಿದ್ದಕ್ಕೆ ರಣವೀರ್ ಸಿಂಗ್ ಗೆ ಹೆಚ್ಚಾಯ್ತು ಬೇಡಿಕೆ!

ಶುಕ್ರವಾರ, 5 ಆಗಸ್ಟ್ 2022 (09:35 IST)
ಮುಂಬೈ: ಬೆತ್ತಲೆ ಪೋಸ್ ನೀಡಿ ಇತ್ತೀಚೆಗೆ ಟ್ರೋಲ್ ಗೊಳಗಾಗಿದ್ದರು ಬಾಲಿವುಡ್ ನಟ ರಣವೀರ್ ಸಿಂಗ್ ಗೆ ಲಾಭವೂ ಆಗಿದೆ.

ಮ್ಯಾಗಜಿನ್ ಒಂದರ ಕವರ್ ಪೇಜ್ ಫೋಟೋ ಶೂಟ್ ಗಾಗಿ ಬೆತ್ತಲೆ ಪೋಸ್ ನೀಡಿದ್ದ ರಣವೀರ್ ವಿರುದ್ಧ ಎನ್ ಜಿಒ ಸಂಸ್ಥೆಯೊಂದು ದೂರು ಕೂಡಾ ನೀಡಿತ್ತು.

ಅದೇನೇ ಇದ್ದರೂ ಬೆತ್ತಲೆ ಪೋಸ್ ನೀಡಿದ್ದಕ್ಕೆ ರಣವೀರ್ ಗೆ ಬೇಡಿಕೆ ಹೆಚ್ಚಾಗಿದೆ. ಪ್ರಾಣಿ ದಯಾ ಸಂಘ ಪೆಟಾ ತನ್ನ ಅಭಿಯಾನವೊಂದಕ್ಕೆ ರಣವೀರ್ ಸಿಂಗ್ ಗೆ ಮತ್ತೆ ಬೆತ್ತಲೆ ಪೋಸ್ ನೀಡಲು ಆಹ್ವಾನ ನೀಡಿದೆ. ಇದನ್ನು ರಣವೀರ್ ಒಪ್ಪಿಕೊಳ್ಳುತ್ತಾರೋ, ತಿರಸ್ಕರಿಸುತ್ತಾರೋ ಕಾದು ನೋಡಬೇಕಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ