ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಲೇ ವಿವಾದವನ್ನು ಮೈಮೇಲೆಳೆದುಕೊಂಡ ಸೈಫ್ ಆಲಿ ಖಾನ್ ಪುತ್ರಿ ನಟಿ ಸಾರಾ ಅಲಿ ಖಾನ್

ಸೋಮವಾರ, 28 ಮೇ 2018 (07:01 IST)
ಮುಂಬೈ : 'ಕೇದರನಾಥ್' ಸಿನಿಮಾ ಡೇಟ್ಸ್ ವಿಚಾರದಲ್ಲಿ ವಿವಾದ ಉಂಟಾಗಿರುವ ಹಿನ್ನೆಲೆಯಲ್ಲಿ ಇದೀಗ ಚಿತ್ರತಂಡ ನಟ ಸೈಫ್ ಆಲಿ ಖಾನ್ ಮಗಳು ಸಾರಾ ಅಲಿ ಖಾನ್ ಅವರ ವಿರುದ್ಧ ಪ್ರಕರಣ ದಾಖಲಿಸಿದೆ.


ನಟಿ ಸಾರಾ ಅಲಿ ಖಾನ್ ಅವರು ಅಭಿಷೇಕ್ ಕಪೂರ್ ನಿರ್ದೇಶಿಸುತ್ತಿರುವ 'ಕೇದರನಾಥ್' ಚಿತ್ರಕ್ಕಾಗಿ 2018 ಜೂನ್‌ ವರೆಗೂ ಡೇಟ್ಸ್ ಕೊಟ್ಟಿದ್ದರು. ಆದರೆ ನಿರ್ಮಾಪಕರಿಗೆ, ನಿರ್ದೇಶಕರಿಗೂ ನಡುವೆ ವಿವಾದಗಳು ಉಂಟಾದ ಕಾರಣ ಈ ಸಿನಿಮಾದ ನಿರ್ಮಾಣ ನಿಂತು ಹೋಗಿತ್ತು. ಆದಕಾರಣ ನಟಿ ಸಾರಾ ಅವರು ತಮ್ಮ ಮತ್ತೊಂದು ಚಿತ್ರ 'ಸಿಂಬಾ' ಸಿನಿಮಾಗೆ ಡೇಟ್ಸ್ ಅಡ್ಜೆಸ್ಟ್ ಮಾಡಿದ್ದರು.


ಆದರೆ ಇದೀಗ 'ಕೇದರನಾಥ್' ಸಿನಿಮಾಕ್ಕೆ ಇನ್ನೊಬ್ಬ ನಿರ್ಮಾಪಕ ಸಿಕ್ಕಿದ ಕಾರಣ ಚಿತ್ರತಂಡ ಮತ್ತೆ ಶೂಟಿಂಗ್ ಶುರುಮಾಡಿತ್ತು. ಆದರೆ ನಟಿ ಸಾರಾ ಅವರ ಮ್ಯಾನೇಜರ್ ಮಾತ್ರ ಸಿಂಬಾ ಶೂಟಿಂಗ್ ಪೂರ್ಣವಾದ ನಂತರ  ಕೇದರ್‌‍ನಾಥ್ ಚಿತ್ರಕರಣದಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದ. ಇದರಿಂದ ಕೋಪಗೊಂಡ ಕೇದರ್‌ ನಾಥ್ ಸಿನಿಮಾ ನಿರ್ಮಾಪಕರು ಸಾರಾ ಮೇಲೆ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದ ಬಗ್ಗೆ ಮುಂಬೈ ಹೈ ಕೋರ್ಟ್ ಎಸ್ ಜೆ ಕಥ್‌ ವಾಲಾ ನೇತೃತ್ವದ ಪೀಠ ವಿಚಾರಣೆ ನಡೆಸಲಿದೆ ಎಂಬುದಾಗಿ ತಿಳಿದುಬಂದಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ