ಸಲ್ಮಾನ್ ಫಾರ್ಮ್ ಹೌಸ್ ನಲ್ಲಿ ನಟರನ್ನು ಸಾಯಿಸಲಾಗಿದೆ, ಮಕ್ಕಳ ಕಳ್ಳಸಾಗಣಿಕೆ ಮಾಡಲಾಗುತ್ತಿದೆ!

ಸೋಮವಾರ, 24 ಜನವರಿ 2022 (09:38 IST)
ಮುಂಬೈ: ಬಾಲಿವುಡ್ ನಟ ಸಲ್ಮಾನ್ ಖಾನ್ ಮತ್ತು ಅವರ ನೆರೆಮನೆಯ ಕೇತನ್ ಕಕ್ಕದ್ ನಡುವಿನ ತಿಕ್ಕಾಟ ಈಗ ತಾರಕಕ್ಕೇರಿದೆ.

ಪಾನ್ವೆಲ್ ಫಾರ್ಮ್ ಹೌಸ್ ನಲ್ಲಿ ಎಷ್ಟೋ ನಟರನ್ನು ಸಮಾಧಿ ಮಾಡಲಾಗಿದೆ. ಇಲ್ಲಿ ಮಕ್ಕಳ ಕಳ್ಳಸಾಗಣಿಕೆ ನಡೆಯುತ್ತಿದೆ ಎಂದು ಕೇತನ್ ಹೊಸದಾಗಿ ಆರೋಪ ಮಾಡಿದ್ದಾರೆ.

ಈಗಾಗಲೇ ತಮ್ಮ ಮೇಲೆ ಆರೋಪ ಮಾಡಿರುವ ಕೇತನ್ ವಿರುದ್ಧ ಸಲ್ಮಾನ್ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ. ಇನ್ನು ಹೊಸ ಆರೋಪಗಳಿಗೆ ಪ್ರತಿಕ್ರಿಯಿಸಿರುವ ಸಲ್ಮಾನ್ ಪರ ವಕೀಲ ಪ್ರದೀಪ್ ಗಾಂಧಿ, ಯಾವುದೇ ಸಾಕ್ಷ್ಯಾಧಾರಗಳಿಲ್ಲದೇ ಕೇತನ್ ಕಕ್ಕದ್ ಆರೋಪ ಮಾಡುತ್ತಿದ್ದಾರೆ. ಇದು ನಟನ ಗೌರವ ಕಳೆಯುವ ಹುನ್ನಾರವಷ್ಟೇ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ