ದೀಪಿಕಾ ಹಸಿಬಿಸಿ ದೃಶ್ಯಗಳನ್ನು ನೋಡಿ ಪತಿ ರಣವೀರ್ ಪ್ರತಿಕ್ರಿಯೆ ಏನು ಗೊತ್ತಾ?
ಈ ಸಿನಿಮಾದ ಟ್ರೈಲರ್ ಈಗ ಯೂ ಟ್ಯೂಬ್ ನಲ್ಲಿ ಟ್ರೆಂಡ್ ಆಗಿದೆ. ದೀಪಿಕಾರ ಬೋಲ್ಡ್ ಲುಕ್ ಎಲ್ಲರೂ ಹುಬ್ಬೇರುವಂತೆ ಮಾಡಿದೆ. ಮದುವೆಯಾದ ಮೇಲೂ ದೀಪಿಕಾ ಮೈ ಚಳಿ ಬಿಟ್ಟು ನಟಿಸಿರುವುದು ಎಲ್ಲರಿಗೂ ಇಷ್ಟವಾಗಿದೆ.
ಈ ನಡುವೆ ದೀಪಿಕಾ ಪತಿ ರಣವೀರ್ ಕೂಡಾ ಸಿನಿಮಾ ಟ್ರೈಲರ್ ಬಗ್ಗೆ ಮೆಚ್ಚುಗೆಯ ಮಾತನಾಡಿದ್ದಾರೆ. ಮೂಡಿ, ಸೆಕ್ಸಿ, ತೀವ್ರತೆಯಿದೆ. ನನಗೆ ಟ್ರೈಲರ್ ಭಾರೀ ಇಷ್ಟವಾಗಿದೆ. ನನ್ನ ಹುಡುಗಿಯಂತೂ ಅದ್ಭುತವಾಗಿ ಅಭಿನಯಿಸಿದ್ದಾಳೆ ಎಂದು ಪತ್ನಿಗೆ ಮೆಚ್ಚುಗೆ ಸೂಚಿಸಿದ್ದಾರೆ ರಣವೀರ್.