ಡೇಟ್ ಮಾಡುವ ಬಯಕೆ ವ್ಯಕ್ತಪಡಿಸಿದ ಸಾರಾ ಅಲಿ ಖಾನ್ ಗೆ ಲವ್ ಯೂ ಎಂದ ವಿಜಯ್ ದೇವರಕೊಂಡ
ಕಾಫಿ ವಿತ್ ಕರಣ್ ಶೋನಲ್ಲಿ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಮತ್ತು ಜಾಹ್ನವಿ ಕಪೂರ್ ಭಾಗವಹಿಸಿದ್ದರು. ಈ ವೇಳೆ ಡೇಟಿಂಗ್ ಮಾಡಲು ಬಯಸುವ ಒಬ್ಬ ಹುಡುಗನ ಹೆಸರು ಹೇಳಿ ಎಂದು ಪ್ರಶ್ನಿಸಿದಾಗ ವಿಜಯ್ ದೇವರಕೊಂಡ ಜೊತೆ ಡೇಟಿಂಗ್ ಮಾಡಲು ಬಯಸುವುದಾಗಿ ಹೇಳಿದ್ದಾರೆ.
ಇದಕ್ಕೆ ವಿಜಯ್ ಕೂಡಾ ಪ್ರತಿಕ್ರಿಯಿಸಿದ್ದು, ನೀವು ನನ್ನ ಹೆಸರನ್ನು ದೇವರಕೊಂಡ ಎಂದು ಉಚ್ಚರಿಸುವುದೇ ಕ್ಯೂಟ್ ಆಗಿದೆ. ನಿಮಗೆ ನನ್ನ ಬಿಗ್ ಹಗ್ ಮತ್ತು ನಿಮ್ಮ ಮೇಲೆ ಪ್ರೀತಿಯಿದೆ ಎಂದು ಸಾರಾ ಮತ್ತು ಜಾಹ್ನವಿಗೆ ಹೇಳಿದ್ದಾರೆ. ಸಾರಾ ಹೇಳಿಕೆ ಮತ್ತು ವಿಜಯ್ ಪ್ರತಿಕ್ರಿಯೆ ಈಗ ವೈರಲ್ ಆಗಿದೆ.