ದೇಶದಾದ್ಯಂತ ನಾನ್ ವೆಜ್ ಬ್ಯಾನ್ ಮಾಡ್ಬೇಕು: ಶತ್ರುಘ್ನ ಸಿನ್ಹಾ ಟ್ರೋಲ್

Krishnaveni K

ಗುರುವಾರ, 6 ಫೆಬ್ರವರಿ 2025 (09:47 IST)
Photo Credit: X
ನವದೆಹಲಿ: ದೇಶದಾದ್ಯಂತ ಕೇವಲ ಗೋಮಾಂಸ ಮಾತ್ರವಲ್ಲ, ಎಲ್ಲಾ ರೀತಿಯ ನಾನ್ ವೆಜ್ ಬ್ಯಾನ್ ಮಾಡಬೇಕು ಎಂದು ನಟ, ಟಿಎಂಸಿ ಸಂಸದ ಶತ್ರುಘ್ನ ಸಿನ್ಹಾ ಹೇಳಿಕೆ ನೀಡಿದ್ದು ಟ್ರೋಲ್ ಗೊಳಗಾಗಿದ್ದಾರೆ.

ಸಂಸತ್ ಭವನದ ಮುಂದೆ ಮಾಧ್ಯಮಗಳೊಂದಿಗೆ ಮಾತನಾಡುವಾಗ ಶತ್ರುಘ್ನ ಇಂತಹದ್ದೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಯಾಗಬೇಕು. ಎಲ್ಲರೂ ಇದನ್ನು ಒಪ್ಪುತ್ತಾರೆ ಎಂದು ನನಗೆ ಅನಿಸುತ್ತದೆ. ಕೇವಲ ಗೋಮಾಂಸ ಮಾತ್ರವಲ್ಲ, ದೇಶದಲ್ಲಿ ಎಲ್ಲಾ ರೀತಿಯ ಮಾಂಸಾಹಾರ ನಿಷೇಧವಾಗಬೇಕು ಎಂದಿದ್ದಾರೆ.

ಅವರ ಈ ಹೇಳಿಕೆ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಟ್ರೋಲ್ ಆಗಿದೆ. ಶತ್ರುಘ್ನ ಸಿನ್ಹಾ ಈ ಮೂಲಕ ಟಿಎಂಸಿ ನಿಯಮಗಳನ್ನು ಮೀರಿದ್ದಾರೆ ಎಂದಿದ್ದಾರೆ. ಇನ್ನು ಕೆಲವರು ಟಿಎಂಸಿ ಕೂಡಾ ಆರ್ ಎಸ್ಎಸ್ ನಿಯಂತ್ರಣದಲ್ಲಿದೆ ಎನ್ನುವುದು ಈ ಮೂಲಕ ಸಾಬೀತಾಗಿದೆ ಎಂದು ಟಾಂಗ್ ಕೊಟ್ಟಿದ್ದಾರೆ.

ಇನ್ನೊಬ್ಬರ ಆಹಾರದ ಆಯ್ಕೆ ಬಗ್ಗೆ ಪ್ರಶ್ನೆ ಮಾಡುವುದು ತಪ್ಪು. ಇಂತಹ ಹೇಳಿಕೆ ನೀಡಲು ನಿಮಗೆ ನಿಮ್ಮ ಪಕ್ಷ ಒಪ್ಪಿಗೆ ಕೊಟ್ಟಿದೆಯೇ ಎಂದು ಕೆಲವರು ಟೀಕೆ ಮಾಡಿದ್ದಾರೆ. ಬಹುಶಃ ಇದನ್ನು ನಿಮ್ಮ ಮಗಳು, ಅಳಿಯನೇ ಒಪ್ಪಲ್ಲ ಎಂದು ಕಿಡಿ ಕಾರಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ