ಮದುವೆಗೆ ಮುನ್ನ ಹೊಸ ಮನೆ ಮಾಡಿಕೊಂಡ ಕೆಎಲ್ ರಾಹುಲ್-ಅಥಿಯಾ

ಗುರುವಾರ, 25 ಆಗಸ್ಟ್ 2022 (08:20 IST)
ಮುಂಬೈ: ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಮತ್ತು ಸುನಿಲ್ ಶೆಟ್ಟಿ ಪುತ್ರಿ ಅಥಿಯಾ ಮದುವೆಗೆ ಸಿದ್ಧರಾಗಿದ್ದಾರೆ. ಆದರೆ ರಾಹುಲ್ ಬ್ಯುಸಿ ಶೆಡ್ಯೂಲ್ ನಿಂದಾಗಿ ಮದುವೆ ಸದ್ಯಕ್ಕಿಲ್ಲ ಎಂದು ಸುನಿಲ್ ಶೆಟ್ಟಿ ಹೇಳಿದ್ದರು.

ಆದರೆ ಮದುವೆ ಬಳಿಕ ಜೀವನಕ್ಕಾಗಿ ಕೆಎಲ್ ರಾಹುಲ್ ಮತ್ತು ಅಥಿಯಾ ಈಗಾಗಲೇ ಮುಂಬೈನ ಪ್ರತಿಷ್ಠಿತ ಅಪಾರ್ಟ್ ಮೆಂಟ್ ನಲ್ಲಿ ಮನೆ ಮಾಡಿಕೊಂಡಿದ್ದಾರಂತೆ.

ಸದ್ಯದಲ್ಲೇ ಇಬ್ಬರೂ ಅಲ್ಲಿಗೆ ಶಿಫ್ಟ್ ಆಗಲಿದ್ದಾರೆ ಎಂಬ ಸುದ್ದಿಯಿದೆ. ಹೀಗಾಗಿ ಮದುವೆ ಬಳಿಕದ ಜೀವನಕ್ಕೆ ಈಗಾಗಲೇ ಈ ಜೋಡಿ ಸಿದ್ಧತೆ ನಡೆಸುತ್ತಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ