ಮಗಳ ಮದುವೆಯಲ್ಲಿ ಪಂಚೆ ಉಟ್ಟು ಮಿಂಚಿದ ಸುನಿಲ್ ಶೆಟ್ಟಿ

ಮಂಗಳವಾರ, 24 ಜನವರಿ 2023 (09:11 IST)
Photo Courtesy: Twitter
ಮುಂಬೈ: ಮಗಳ ಮದುವೆ ಎಂದರೆ ಯಾರಿಗೇ ಆದರೂ ಸಂಭ್ರಮ ಇದ್ದೇ ಇರುತ್ತದೆ. ಅದೇ ಸಂಭ್ರಮ ಬಾಲಿವುಡ್ ನಟ ಸುನಿಲ್ ಶೆಟ್ಟಿ ಮೊಗದಲ್ಲೂ ಇತ್ತು.

ಟೀಂ ಇಂಡಿಯಾ ಕ್ರಿಕೆಟಿಗ ಕೆಎಲ್ ರಾಹುಲ್ ಜೊತೆ ಸುನಿಲ್ ಶೆಟ್ಟಿ ಪುತ್ರಿ ಅಥಿಯಾ ನಿನ್ನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸುನಿಲ್ ಶೆಟ್ಟಿ ಫಾರ್ಮ್ ಹೌಸ್ ನಲ್ಲೇ ಈ ಸಮಾರಂಭ ತೀರಾ ಖಾಸಗಿಯಾಗಿ ನೆರವೇರಿತ್ತು.

ಆದರೆ ಮದುವೆ ಕ್ಷಣಗಳನ್ನು ಸೆರೆಹಿಡಿಯುವುದಕ್ಕಾಗಿ ಮಾಧ‍್ಯಮ ಸಿಬ್ಬಂದಿ, ಕ್ಯಾಮರಾ ಮ್ಯಾನ್ ಗಳು ಫಾರ್ಮ್ ಹೌಸ್ ಬಳಿಯೇ ನಿಂತಿದ್ದರು. ಮದುವೆ ಬಳಿಕ ಮಾಧ್ಯಮದ ಮುಂದೆ ಬಂದ ಸುನಿಲ್ ಶೆಟ್ಟಿ ಎಲ್ಲರಿಗೂ ಸಿಹಿ ಹಂಚಿ ಧನ್ಯವಾದ ಸಲ್ಲಿಸಿದರು. ಮಗಳ ಮದುವೆಯಲ್ಲಿ ಸುನಿಲ್ ಶೆಟ್ಟಿ ಉಡುಪು ಎಲ್ಲರ ಗಮನ ಸೆಳೆದಿತ್ತು. ಸುನಿಲ್ ಶೆಟ್ಟಿ ಸಾಂಪ್ರದಾಯಿಕವಾಗಿ ಪಂಚೆ ಉಟ್ಟು ಮಿಂಚಿದ್ದಾರೆ. ಅವರ ಜೊತೆಗೆ ಪುತ್ರ ಅಹಾನ್ ಶೆಟ್ಟಿ ಕೂಡಾ ಮಾಧ‍್ಯಮದ ಎದುರು ಬಂದು ಸಿಹಿ ಹಂಚಿ ಧನ್ಯವಾದ ಸಲ್ಲಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ