ರಜನಿಕಾಂತ್ ಪತ್ನಿ ಲತಾ ಮೇಲೆ ಸುಪ್ರೀಂಕೋರ್ಟ್ ಅಸಮಾಧಾನ?

ಬುಧವಾರ, 4 ಜುಲೈ 2018 (15:06 IST)
ಜಾಹೀರಾತು ಸಂಸ್ಥೆಯೊಂದಕ್ಕೆ ಹಣ ಪಾವತಿಸುವ ವಿಚಾರದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಪತ್ನಿ ಲತಾ ರಜನಿಕಾಂತ್ ಅವರನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. 
ಜಾಹೀರಾತು ಸಂಸ್ಥೆಯೊಂದಕ್ಕೆ 6.2 ಕೋಟಿ ರೂ. ಪಾವತಿಸುವ ಸಂಬಂಧ ನ್ಯಾಯಾಲಯಕ್ಕೆ ಶ್ಯೂರಿಟಿ ನೀಡಿದ್ದ ಲತಾ ರಜನಿಕಾಂತ್ ಅವರು, ಆ ಮೊತ್ತವನ್ನು ಕಡಿಮೆಗೊಳಿಸಬೇಕೆಂದು ಕೋರಿ ಸುಪ್ರೀಂ ಕೋರ್ಟ್ ಗೆ ಮನವಿ ಸಲ್ಲಿಸಿದ್ದರು. ಇದರಿಂದ ಅಸಮಾಧಾನಗೊಂಡ ನ್ಯಾಯಾಲಯ, ‘ನ್ಯಾಯಾಲಯದ ಆದೇಶದೊಂದಿಗೆ ಜನರು ಆಟವಾಡುವುದನ್ನು ನಾವು ಬಯಸುವುದಿಲ್ಲ. ನೀವು ವಿಚಾರಣೆ ಎದುರಿಸಿ, ನೀವು ಅಮಯಾಕರಾದರೆ, ನಿಮ್ಮನ್ನು ಖುಲಾಸೆಗೊಳಿಸಲಾಗುವುದು ಎಂದು ನ್ಯಾ. ರಂಜನ್ ಅವರ ನೇತೃತ್ವದ ಪೀಠ ಹೇಳಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ