ಭಾರತ-ಪಾಕ್ ಪಂದ್ಯಕ್ಕೆ ಬಂದು ಐಫೋನ್ ಕಳೆದುಕೊಂಡ ನಟಿ ಊರ್ವಶಿ ರೌಟೇಲಾ

ಭಾನುವಾರ, 15 ಅಕ್ಟೋಬರ್ 2023 (16:55 IST)
ಅಹಮ್ಮದಾಬಾದ್: ಭಾರತ ಮತ್ತು ಪಾಕಿಸ್ತಾನ ನಡುವಿನ ಏಕದಿನ ವಿಶ್ವಕಪ್ ಪಂದ್ಯ ವೀಕ್ಷಿಸಲು ಬಂದಿದ್ದ ನಟಿ ಊರ್ವಶಿ ರೌಟೇಲಾ ಐಫೋನ್ ಕಳೆದುಕೊಂಡಿದ್ದಾರೆ!

ಭಾರತ-ಪಾಕ್ ಪಂದ್ಯ ನೋಡಲು ರಾಜಕಾರಣಿಗಳು, ಸಿನಿಮಾ ಸೆಲೆಬ್ರಿಟಿಗಳೂ ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದರು. ಅದೇ ರೀತಿ ಊರ್ವಶಿ ಕೂಡಾ ಪಂದ್ಯ ನೋಡಲು ಬಂದಿದ್ದರು.

ಆದರೆ ಪಂದ್ಯ ನೋಡುವಾಗ ತಮ್ಮ ದುಬಾರಿ ಬೆಲೆಯ ಐಫೋನ್ ಕಳೆದುಕೊಂಡಿದ್ದಾಗಿ ಊರ್ವಶಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದು 24 ಕ್ಯಾರೆಟ್ ಚಿನ್ನದ ಐಫೋನ್. ಸಿಕ್ಕವರು ದಯವಿಟ್ಟು ಕೊಡಿ ಎಂದು ಸೋಷಿಯಲ್ ಮೀಡಿಯಾದಲ್ಲಿ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ