ವಿರಾಟ್ ಕೊಹ್ಲಿಗೆ ಸಪೋರ್ಟ್ ಮಾಡಲು ಅಹಮ್ಮದಾಬಾದ್ ಗೆ ಬಂದಿಳಿದ ಅನುಷ್ಕಾ ಶರ್ಮಾ
ಟೀಂ ಇಂಡಿಯಾ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಮೇಲೆ ಎಲ್ಲರ ಕಣ್ಣಿದೆ. ಈ ಪಂದ್ಯದಲ್ಲಿ ಕೊಹ್ಲಿ ಮತ್ತು ಟೀಂ ಇಂಡಿಯಾಗೆ ಹುರಿದುಂಬಿಸಲು ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಅಹಮ್ಮದಾಬಾದ್ ಗೆ ಬಂದಿದ್ದಾರೆ.
ಅನುಷ್ಕಾ ಎರಡನೇ ಬಾರಿ ತಾಯಿಯಾಗುತ್ತಿದ್ದಾರೆ. ಈ ಕಾರಣಕ್ಕೆ ಕೊಹ್ಲಿ ಜೊತೆ ಕ್ರಿಕೆಟ್ ಪ್ರಯಾಣದಲ್ಲಿ ಜೊತೆಯಾಗುತ್ತಿಲ್ಲ ಎನ್ನಲಾಗಿತ್ತು. ಆದರೆ ಭಾರತ-ಪಾಕಿಸ್ತಾನದಂತಹ ಪ್ರಮುಖ ಪಂದ್ಯಕ್ಕೆ ಕೊಹ್ಲಿಗೆ ಸಪೋರ್ಟ್ ಮಾಡಲು ಅನುಷ್ಕಾ ಆಗಮಿಸುತ್ತಿದ್ದಾರೆ. ಅನುಷ್ಕಾ ಯಾವಾಗಲೂ ಗಂಡನಿಗೆ ವೃತ್ತಿ ಜೀವನಕ್ಕೆ ಬೆಂಬಲವಾಗಿಯೇ ನಿಂತಿದ್ದಾರೆ. ಈಗಲೂ ಪತಿಗೆ ಬೆಂಬಲಿಸಲು ಕ್ರೀಡಾಂಗಣಕ್ಕೆ ಬರುತ್ತಿದ್ದಾರೆ.