ಅಬ್ಬಾ..! ಊರ್ವಶಿ ರೌಟೇಲಾ ಒಳಉಡುಪಿಗೆ ಚಿನ್ನದ ಲೇಪನ

Krishnaveni K

ಸೋಮವಾರ, 29 ಏಪ್ರಿಲ್ 2024 (15:31 IST)
Photo Courtesy: X
ಮುಂಬೈ: ಬಾಲಿವುಡ್ ನಟಿ ಊರ್ವಶಿ ರೌಟೇಲಾ ಸದಾ ವಿವಾದಗಳಿಂದಲೇ ಸುದ್ದಿಯಾಗುತ್ತಾರೆ. ಇದೀಗ ಅವರು ಧರಿಸಿದ ಒಳಉಡುಪಿನಿಂದ ಎಲ್ಲರ ಗಮನ ಸೆಳೆದಿದ್ದಾರೆ.

ಊರ್ವಶಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಒಳ ಉಡುಪಿನ ದರ್ಶನವಾಗುವಂತಹ ಫೋಟೋವೊಂದನ್ನು ಶೇರ್ ಮಾಡಿದ್ದಾರೆ. ತಮ್ಮ ಖಾಸಗಿ ಅಂಗಾಗವನ್ನು ಧಾರಾಳವಾಗಿ ದರ್ಶನ ಮಾಡಿರುವ ಊರ್ವಶಿಗೆ ನೆಟ್ಟಿಗರು ಇದು ಚಿನ್ನದ್ದಾ ಎಂದು ಪ್ರಶ್ನೆ ಮಾಡಿದ್ದಾರೆ.

ಆಕೆಯ ಒಳ ಉಡುಪುಗಳನ್ನು ನೋಡಿದರೆ ಚಿನ್ನದ ಲೇಪನ ಮಾಡಿದಂತಿದೆ. ತಮ್ಮ ಚಿತ್ರ ವಿಚಿತ್ರ ಪೋಷಾಕಿನಿಂದಲೇ ಗಮನ ಸೆಳೆಯುವ ಊರ್ವಶಿ ಈ ಮೊದಲು ವಜ್ರಖಚಿತ ಮೊಬೈಲ್ ಬಳಕೆ ಮಾಡಿ ಸುದ್ದಿಯಾಗಿದ್ದರು. ಹೀಗಾಗಿ ಒಳಉಡುಪು ಕೂಡಾ ಚಿನ್ನ ಲೇಪಿತವಾಗಿದ್ದರೂ ಅಚ್ಚರಿಯೇನಿಲ್ಲ.

ತಾನು ರಿಷಬ್ ಪಂತ್ ಮಾಜಿ ಪ್ರೇಯಸಿ ಎನ್ನುವ ಮೂಲಕ ಊರ್ವಶಿ ಮನೆ ಮಾತಾಗಿದ್ದಳು. ರಿಷಬ್ ಹಲವು ಬಾರಿ ಊರ್ವಶಿ ವಿಚಾರಕ್ಕೆ ಮೈದಾನದಲ್ಲೂ ತಮಾಷೆಗೊಳಗಾಗಿದ್ದು ಇದೆ. ಇತ್ತೀಚೆಗೆ ರಿಷಬ್ ಪಂತ್ ಎತ್ತರದ ಬಗ್ಗೆ ಮಾತನಾಡಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಆದರೆ ವಿವಾದವಾಗುತ್ತಿದ್ದಂತೇ ಅದು ಜಾಹೀರಾತು ಡೈಲಾಗ್. ನಾನು ರಿಷಬ್ ಬಗ್ಗೆ ಏನೂ ಮಾತನಾಡಲ್ಲ ಎಂದು ವಿವಾದಕ್ಕೆ ಅಂತ್ಯ ಹಾಡಲು ಯತ್ನಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ