ಅನುಷ್ಕಾ ಶರ್ಮಾ ಬಗ್ಗೆ ರಣವೀರ್ ಸಿಂಗ್ ಹೇಳಿದ್ದೇನು?

ಮಂಗಳವಾರ, 11 ಸೆಪ್ಟಂಬರ್ 2018 (15:31 IST)
ಮುಂಬೈ: ಅನುಷ್ಕಾ ಹಾಗೂ ರಣವೀರ್ ಸಿಂಗ್ ಮಧ್ಯೆ ಮೊದಲು ಪ್ರೀತಿ ಮೂಡಿತ್ತು. ರಣವೀರ್ ಹಾಗೂ ಅನುಷ್ಕಾ ಬ್ಯಾಂಡ್ ಬಾಜಾ ಬಾರಾತ್ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು. ಈ ಚಿತ್ರದ ಮೂಲಕವೇ ಇಬ್ಬರು ಹತ್ತಿರವಾಗಿದ್ದರು. ಇವರಿಬ್ಬರ ಡೇಟಿಂಗ್ ಸುದ್ದಿ ಗಾಸಿಪ್ ಪ್ರಿಯರ ಬಾಯಲ್ಲಿ ಆಗಾಗ ಕೇಳಿಬರುತ್ತಿತ್ತು.


ಆದರೆ ಕೆಲವೇ ದಿನಗಳಲ್ಲಿ ಇಬ್ಬರೂ ಬೇರೆಯಾದರು. ಕರಣ್ ಜೋಹರ್ ಚಾಟ್ ಶೋಗೆ ಬಂದಿದ್ದ ಅನುಷ್ಕಾ  ಬ್ರೇಕ್ ಅಪ್ ಗೆ ಕಾರಣವೇನು ಎಂಬುದನ್ನು ಹೇಳಿದ್ದರು. ರಣವೀರ್ `ಡರ್ಟಿ ಬಾಯ್’. ಹಾಗಾಗಿ ದೂರವಾದೆ ಎಂತಾ ನಗುತ್ತಲೆ ಕಾಲೆಳೆದಿದ್ದರು.


ಇವರಿಬ್ಬರೂ ಬೇರೆಯಾಗಿದ್ದರೂ ಈಗಲೂ ರಣವೀರ್ ಅನುಷ್ಕಾ ಸ್ನೇಹ ಮರೆತಿಲ್ಲ. ಸಂದರ್ಶನವೊಂದರಲ್ಲಿ ರಣವೀರ್ ಈ ಬಗ್ಗೆ ಹೇಳಿದ್ದರು. ಅನುಷ್ಕಾ ಈಗಲೂ ಸ್ಪೆಷಲ್ ಕೆಟಗರಿಯಲ್ಲಿ ಬರ್ತಾರೆ. ಅನುಷ್ಕಾ ಸ್ನೇಹವನ್ನು ನಾನು ಮಿಸ್ ಮಾಡಿಕೊಳ್ತೇನೆ ಎಂದು ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ