ಅನುಷ್ಕಾ ಶರ್ಮಾ ಯಾಕೆ ವಿರಾಟ್ ಕೊಹ್ಲಿ ಟಿ-ಶರ್ಟ್ ಗೆ ಕನ್ನ ಹಾಕುತ್ತಾರೆ ಗೊತ್ತಾ?!

ಶನಿವಾರ, 9 ನವೆಂಬರ್ 2019 (09:32 IST)
ಮುಂಬೈ: ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಹೊರಗಡೆ ಎಲ್ಲೇ ಜತೆಯಾಗಿ ಹೋಗುವುದಿದ್ದರೂ ತಮ್ಮ ಡ್ರೆಸ್ ನಿಂದಲೇ ಗಮನ ಸೆಳೆಯುತ್ತಾರೆ. ಇವರಿಬ್ಬರ ಸ್ಟೈಲ್ ಸ್ಟೇಟ್ ಮೆಂಟ್ ಎಷ್ಟೋ ಸೆಲೆಬ್ರಿಟಿಗಳಿಗೆ ಮಾದರಿ.


ಇಂತಿಪ್ಪ ಅನುಷ್ಕಾ ಕೆಲವೊಮ್ಮೆ ಪತಿ ವಿರಾಟ್ ಕೊಹ್ಲಿಯ ಟಿ-ಶರ್ಟ್ ಧರಿಸಿ ಓಡಾಡಿ ಕ್ಯಾಮರಾ ಕಣ್ಣಿಗೆ ಬಿದ್ದಿದ್ದು ಇದೆ. ಅಷ್ಟಕ್ಕೂ ತಾನು ಯಾಕೆ ಕೆಲವೊಮ್ಮೆ ಕೊಹ್ಲಿಯ ಶರ್ಟ್ ಧರಿಸುತ್ತೇನೆ ಎಂಬುದನ್ನು ಸ್ವತಃ ಅನುಷ್ಕಾ ಬಹಿರಂಗಪಡಿಸಿದ್ದಾರೆ.

‘ಕೆಲವೊಮ್ಮೆ ನಾನು ವಿರಾಟ್ ವಾರ್ಡ್ ರೋಬ್‍ ಗೆ ಕನ್ನ ಹಾಕುತ್ತೇನೆ. ಹೆಚ್ಚಾಗಿ ಟಿ ಶರ್ಟ್ ತೊಟ್ಟುಕೊಳ್ಳುತ್ತೇನೆ, ಇಲ್ಲವೇ ವಿರಾಟ್ ರ ಜಾಕೆಟ್ ಧರಿಸುತ್ತೇನೆ. ನಾನು ಯಾಕೆ ಹೀಗೆ ಮಾಡುತ್ತೇನೆಂದರೆ, ನಾನು ವಿರಾಟ್ ಡ್ರೆಸ್ ತೊಟ್ಟರೆ ಅವರು ಖುಷಿಪಡುತ್ತಾರೆ. ಅದಕ್ಕೆ ಹೀಗೆ ಮಾಡುತ್ತೇನೆ’ ಎಂದು ಅನುಷ್ಕಾ ಹೇಳಿಕೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ