ಮುಂಬೈ: ಮಗಳ ಜತೆಗಿರುವ ಒಂದು ಫೋಟೋವನ್ನು ಅಪ್ಲೋಡ್ ಮಾಡಿದ ಹಿನ್ನೆಲೆ ಬಾಲಿವುಡ್ ನ ಅಮೀರ್ ಖಾನ್ ಈಗ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿದ್ದಾರೆ.
ಅಮೀರ್ ಖಾನ್ ಮಗಳು ಇರಾ ಖಾನ್ ಜತೆ ಪಾರ್ಕ್ ನಲ್ಲಿ ಆಟದ ಮೂಡಿನಲ್ಲಿರುವ ಫೋಟೋ ಒಂದನ್ನು ಹಾಕಿದ್ದಾರೆ. ಈ ಫೋಟೋ ಟ್ರೋಲರ್ ಗಳಿಗೆ ಇಷ್ಟವಾಗಿಲ್ಲ. ಫೋಟೋ ಬಗ್ಗೆ ಅಸಹ್ಯ ಹಾಗೂ ಕೆಟ್ಟ ಕಮೆಂಟ್ ಮಾಡಿದ್ದಾರೆ.
ರಂಜಾನ್ ವೇಳೆ ಇಂಥ ಫೋಟೋವನ್ನು ಅಮೀರ್ ಹಾಕಬಾರದಿತ್ತು ಅಂತಾ ಕೆಲವರು ಹೇಳಿದ್ರೆ ಮತ್ತೆ ಕೆಲವರು ತಂದೆ-ಮಗಳ ಪವಿತ್ರ ಸಂಬಂಧದ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ. ರಂಜಾನ್ ಸಮಯ ಇದು. ಮಗಳಿಗೆ ಸರಿಯಾದ ಬಟ್ಟೆ ತೊಡಿಸಿ ಎಂದು ಅಭಿಮಾನಿಗಳು ಅಮೀರ್ ಖಾನ್ ಗೆ ಸಲಹೆ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ