ಆಸ್ಕರ್ ಪ್ರಶಸ್ತಿ ಕಾರ್ಯಕ್ರಮಕ್ಕೆ ಪ್ರಿಯಾಂಕ ಚೋಪ್ರಾ ಗೈರು ಆಗಿದ್ದು ಯಾಕಂತೆ ಗೊತ್ತಾ...?

ಮಂಗಳವಾರ, 6 ಮಾರ್ಚ್ 2018 (11:04 IST)
ಲಾಸ್‌ ಏಂಜಲೀಸ್‌: 2018 ನೇ ಸಾಲಿನ ಆಸ್ಕರ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಬಾಲಿವುಡ್ ಬ್ಯೂಟಿ ಪ್ರಿಯಾಂಕಾ ಚೋಪ್ರಾ ಭಾಗವಹಿಸಿಲ್ಲ. ಈ ಬಗ್ಗೆ ಅಭಿಮಾನಿಗಳಿಗೆ ತುಂಬಾ ಬೇಸರವಾಗಿದೆ.

2016 ಹಾಗೂ 2017 ರ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ರೆಡ್‌ ಕಾರ್ಪೆಟ್‌ ಮೇಲೆ ವಾಕ್ ಮಾಡಿ ಎಲ್ಲರನ್ನೂ ಬೆರಗುಗೊಳಿಸಿದ್ದ ಪಿಗ್ಗಿ, ಈ ಸಾರಿ ಗೈರಾಗಿರುವುದು ಸಾಕಷ್ಟು ಜನರಲ್ಲಿ ಅಸಮಾಧಾನವನ್ನುಂಟು ಮಾಡಿತ್ತು.


ಈ ಬಾರಿಯ ಆಸ್ಕರ್ ಅವಾರ್ಡ್‌ ಫಂಕ್ಷನ್‌ನಿಂದ ಪ್ರಿಯಾಂಕಾ ದೂರ ಉಳಿದಿರುವುದಕ್ಕೆ ಕಾರಣ ಸಿಕ್ಕಿದೆ. ಅನಾರೋಗ್ಯದಿಂದ ಸಮಸ್ಯೆಯಿಂದಾಗಿ ಪ್ರಿಯಾಂಕ ಇವೆಂಟ್‌ನಲ್ಲಿ ಭಾಗಿಯಾಗಿಲ್ಲವಂತೆ.



ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ