ಉತ್ತಮ ಕಾಫೀ ಬೀಜಗಳ ಬೆಳವಣಿಗೆ

ಒಂದು ಒಳ್ಳೆಯ ಕಪ್ ಕಾಫೀಯಲ್ಲಿರುವ ಅತ್ಯಂತ ಮಹತ್ವದ ಪದಾರ್ಥವೇ ಕಾಫೀ ಬೀಜ! ನಾವು ಕಾಫೀ ಅಂತ ತಿಳಿದುಕೊಂಡಿರೋ ಕಂದುಬಣ್ಣದ ಪುಡಿ, ನಿಜಕ್ಕೂ ಹಲವಾರು ಸುದೀರ್ಘ ಕಾರ್ಯವಿಧಾನಗಳ ಮೂಲಕ ಹೊರಬಂದಿರುವ ಉತ್ಪನ್ನ. ಕಾಫಿಯು ಕಾಫೀ ಗಿಡದ ಹಣ್ಣಿನಿಂದ ಬರುತ್ತದೆ. ವಾಣಿಜ್ಯ ಬೆಳೆಗಾಗಿ ಸಸ್ಯ ರೂಪದಲ್ಲಿರುವ ಬಹುವಾರ್ಷಿಕ ಬೆಳೆ ಈ ಕಾಫೀ. ಇದು ಜಗತ್ತಿನೆಲ್ಲೆಡೆ ಉಷ್ಣವಲಯದಲ್ಲಿ ಬೆಳೆಯುತ್ತದೆ.

ಹೆಚ್ಚಿನ ಹಣ್ಣಿನ ಮರಗಳಂತೆಯೇ, ಕಾಫಿ ಮರಗಳೂ ಹೂವರಳುವ ಮತ್ತು ಕಾಯಿಯಾಗುವ ವಾರ್ಷಿಕ ಜೀವನ ಚಕ್ರವನ್ನು ಹೊಂದಿರುತ್ತವೆ. ಏಪ್ರಿಲ್ ಬಂದಿತೆಂದರೆ, ಭಾರತದ ಕಾಫೀ ನಾಡುಗಳ ಬೆಟ್ಟ ಪ್ರದೇಶಗಳು ಒಂದು ವಾರ ಕಾಲ ಹಿಮದಿಂದ ಆವೃತವಾಗಿರುತ್ತವೆ. ಮುಂಗಾರುಪೂರ್ವ ಮಳೆಯ ನಂತರ ಕಾಫೀ ಗಿಡಗಳಲ್ಲಿ ಸುವಾಸನಾಭರಿತ ಹೂವುಗಳು ಅರಳುತ್ತವೆ.

ಕೆಲವೇ ದಿನಗಳಲ್ಲಿ, ಈ ಹೂವುಗಳು ಕಾಯಿಯಾಗುತ್ತವೆ, ನಿಧಾನವಾಗಿ ಅವುಗಳು ಹಸಿರು ಬಣ್ಣದಿಂದ ಕೆಂಪು ಚೆರಿಗಳಾಗಿ ಮಾರ್ಪಾಡಾಗುತ್ತವೆ ಮತ್ತು ಡಿಸೆಂಬರ್ ವೇಳೆಗೆ ಕಟಾವಿಗೆ ಸಿದ್ಧವಾಗುತ್ತವೆ. ಜನವರಿ ತಿಂಗಳಿಂದ ಮಾರ್ಚ್‌ವರೆಗಿನ ತಿಂಗಳುಗಳು ಕಾಫೀ ಎಸ್ಟೇಟ್‌ಗಳಲ್ಲಿ ಭಾರೀ ಚಟುವಟಿಕೆಯ ದಿನಗಳು. ಕಾಫೀ ಹಣ್ಣುಗಳನ್ನು ಕೈಯಿಂದಲೇ ಕಿತ್ತು, ಸಂಸ್ಕರಿಸಲು ಕಳುಹಿಸಲಾಗುತ್ತದೆ. ಕಾಫಿ ಹಣ್ಣುಗಳನ್ನು ಸುಲಿದು, ಅದರೊಳಗಿರುವ ಬೀಜಗಳನ್ನು ಪ್ರತ್ಯೇಕಿಸಲಾಗುತ್ತದೆ.

ಚಿತ್ರ: ಎಲ್ಲಾ ಕಾಫೀ ಎಸ್ಟೇಟ್‌ಗಳಲ್ಲಿ ಕಾಣಸಿಗುವ ಕಾಫೀ ಬೀಜ ಒಣಗಿಸುವ ಬೃಹತ್ ಯಾರ್ಡ್. ಇಲ್ಲಿ ಕಾಫೀ ಬೀಜಗಳನ್ನು ಸಮವಾಗಿ ಹರಡಿ, ಅವುಗಳು ಸರಿಯಾಗಿ ಒಣಗುವಂತಾಗಲು ಪ್ರತಿ ಒಂದು ಗಂಟೆಗೊಮ್ಮೆ ಕದಡುತ್ತಾ, ರಾಶಿ ಹಾಕುತ್ತಾ ಇರಬೇಕು.


ವೆಬ್ದುನಿಯಾವನ್ನು ಓದಿ