ಭಾರತೀಯ ಕಾಫಿಯ ವಿಶೇಷತೆಗಳು

ಬಣ್ಣ, ರುಚಿ ಹಾಗೂ ಸುವಾಸನೆಯ ಆಧಾರದ ಮೇಲೆ ಮತ್ತು ಬೇಸಾಯ ಹಾಗೂ ಕೊಯ್ಲು ಸಂಸ್ಕರಣೆಗೆ ಅನುಗುಣವಾಗಿ ಆರಿಸಲಾದ ವಿಶೇಷ ಆಯ್ಕೆಯ ಕಾಫಿಗಳನ್ನು ವಿಶ್ವದಾದ್ಯಂತ ವಿಶೇಷಗುಣ ಕಾಫಿ ಎಂದು ಗುರುತಿಸಲಾಗುತ್ತದೆ.

ಈ ವೈಶಿಷ್ಟ್ಯ ಗುಣವುಳ್ಳ ಕಾಫಿಯು ಕಾಫಿರಸಿಕರನ್ನು ಸೆಳೆಯುತ್ತಿದ್ದು, ವಿವಿಧ ರೀತಿಯಲ್ಲಿ ಉಪಯೋಗಿಸಬಹುದಾಗಿದೆ. ಉಳಿದ ವಾಣಿಜ್ಯ ವಿಧಗಳನ್ನಲ್ಲದೆ, ಭಾರತವು ಮೂರು ವಿಶಿಷ್ಟ ರೀತಿಯ ಆಯ್ಕೆಗಳನ್ನು ಹೊಂದಿದೆ.

ಮಾನ್ಸೂನ್ ಮಲಬಾರ್

ಮಲಬಾರ್, ಭಾರತ ಪಶ್ಚಿಮ ತೀರದ ಪ್ರಮುಖ ಕರಾವಳಿಯಾಗಿದ್ದು, ವಾಸ್ತವಿಕವಾಗಿ ಕರ್ನಾಟಕ ಮತ್ತು ಕೇರಳ ರಾಜ್ಯಗಳ ಕರಾವಳಿ ಪ್ರದೇಶವಾಗಿದೆ.

19ನೇ ಶತಮಾನದ ಕೊನೆಯಲ್ಲಿ ಮಲಬಾರ್ ಕರಾವಳಿಯ ತೀರದ ಪಟ್ಟಣಗಳಲ್ಲಿ ಕಾಫಿ ಮಿಲ್ಲಿಂಗ್ ಕಾರ್ಯವು ಪ್ರಾರಂಭಗೊಂಡಿತ್ತು.

ಈ ಹಿಂದೆ ದೈಹಿಕವಾಗಿ ಮತ್ತು ರುಚಿಯಲ್ಲಿ ಮಾನ್ಸೂನ್ ಮಾರುತಗಳು ಬೀಜಗಳನ್ನು ರೂಪಾಂತರಿಸುವ ಸಂದರ್ಭದಲ್ಲಿ , ಹಸಿರು ಕಾಫಿಗಳನ್ನು ತುಂಬಿಕೊಂಡ ಹಡಗು ಯುರೋಪಿಯನ್ ತಲುಪಲು ನಾಲ್ಕರಿಂದ ಆರು ತಿಂಗಳುಗಳು ಬೇಕಾಗಿತ್ತು. ಆದ್ದರಿಂದ ಈ ಮಾನ್ಸೂನ್ ಮಲಬಾರ್‌ಗಳಲ್ಲಿ ಮಾನ್ಸೂನ್ ಕಾಫಿಗೆ ಮಂಗಳೂರು ಮಾತ್ರವೇ ಪ್ರಧಾನ ಕೇಂದ್ರವಾಗಿ ಉಳಿದಿದೆ ಮತ್ತು ಕೆಲವು ಕಂಪನಿಗಳಲ್ಲಿ ಆಸ್ಪಿನ್‌ವಾಲ್ ಮತ್ತು ಕೋಲ್ಹೋ ಮಾನ್ಸೂನಿಂಗ್ ಸೌಲಭ್ಯಕ್ಕೆ ಸೀಮಿತವಾಗಿದೆ.

ವೆಬ್ದುನಿಯಾವನ್ನು ಓದಿ