ಕೊರೋನಾ ಬಂದಾಗ ಏನು ಮಾಡಬೇಕು? ಅನು ಪ್ರಭಾಕರ್ ಹೇಳಿದ ಮೂರು ಗುಟ್ಟುಗಳು

ಶುಕ್ರವಾರ, 23 ಏಪ್ರಿಲ್ 2021 (09:43 IST)
ಬೆಂಗಳೂರು: ಕೊರೋನಾ ಸೋಂಕಿನಿಂದ ಬಳಲುತ್ತಿರುವ ನಟಿ ಅನುಪ್ರಭಾಕರ್ ಈಗ ಕೊರೋನಾ ಬಂದಾಗ ಯಾವ ರೀತಿ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಮೂರು ವಿಡಿಯೋ ಪ್ರಕಟಿಸುವ ಮೂಲಕ ಸಲಹೆ ನೀಡಿದ್ದಾರೆ.

 

ನನಗೆ ಕೊರೋನಾ ಲಕ್ಷಣ ಹೆಚ್ಚೇನೂ ಇರಲಿಲ್ಲ. ಕೇವಲ ಬಾಯಿ ರುಚಿ, ವಾಸನೆ ಹೋಗಿತ್ತು ಅಷ್ಟೇ. ಈ ಸಂದರ್ಭದಲ್ಲೇ ವೈದ್ಯೆಯಾಗಿರುವ ತನ್ನ ಅಕ್ಕನ ಸಲಹೆ ಮೇರೆಗೆ ಐಸೋಲೇಟ್ ಆದೆ. ಇದರಿಂದಾಗಿ ನನ್ನ ಮನೆಯ ಇತರ ಸದಸ್ಯರಿಗೆ ಯಾರಿಗೂ ಕೊರೋನಾ ಬರಲಿಲ್ಲ. ನೀವೂ ಹೀಗೆ ಮಾಡಿ ಎಂದು ಅನು ಪ್ರಭಾಕರ್ ಹೇಳಿದ್ದಾರೆ.

ಇನ್ನೊಂದು ವಿಡಿಯೋ ಮೂಲಕ ‘ನಿಮಗೆ ಲಕ್ಷಣಗಳು ಕಂಡು ಬಂದರೆ ತಕ್ಷಣವೇ ಐಸೋಲೇಟ್ ಆಗಿ. ಪರೀಕ್ಷೆ ಮಾಡಿಸಿಕೊಳ್ಳಿ. ಫಲಿತಾಂಶಕ್ಕೋಸ್ಕರ ಕಾಯಬೇಡಿ. ಅದಕ್ಕೂ ಮೊದಲೇ ಚಿಕಿತ್ಸೆ ಪ್ರಾರಂಭ ಮಾಡಿ. ಮನೆಯಲ್ಲೇ ಐಸೋಲೇಟ್ ಆಗಲು ಅವಕಾಶವಿಲ್ಲದೇ ಹೋದರೆ ಸರ್ಕಾರ ವ್ಯವಸ್ಥೆ ಮಾಡಿರುವ ಕ್ವಾರಂಟೈನ್ ಕೇಂದ್ರಕ್ಕೆ ಹೋಗಿ. ಪ್ರಾರಂಭದ ದಿನಗಳಲ್ಲಿ ವೈದ್ಯರ ಸಲಹೆ ಬೇಕಾಗಬಹುದು. ಹಾಗಂತ ಸರ್ಕಾರದ ಸೌಲಭ್ಯಗಳನ್ನೇ ನಂಬಿ ಕೂರಬೇಡಿ. ನಿಮಗೇ ಗೊತ್ತಿರುವ ಹಾಗೆ ಎಲ್ಲಾ ಆಸ್ಪತ್ರೆಗಳೂ, ವೈದ್ಯರು ಬ್ಯುಸಿಯಾಗಿದ್ದಾರೆ. ಹಾಗಾಗಿ ನಿಮ್ಮ ಎಚ್ಚರಿಕೆ ನೀವೇ ತೆಗೆದುಕೊಳ್ಳಿ’ ಎಂದು ಅನುಪ್ರಭಾಕರ್ ಸಲಹೆ ನೀಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ