ಬೆಂಗಳೂರು: ಕೊರೋನಾ ಸಮಯದಲ್ಲಿ ಹೆರಿಗೆಯಾದರೆ ಅಮ್ಮ-ಮಗುವನ್ನು ಹೇಗೆ ಸುರಕ್ಷಿತವಾಗಿ ನೋಡಿಕೊಳ್ಳುವುದು ಎಂದು ಎಲ್ಲರಿಗೂ ಭಯವಿರುತ್ತದೆ. ಇಬ್ಬರಿಗೂ ಇದು ಸೂಕ್ಷ್ಮ ಅವಧಿಯಾಗಿದ್ದು ಸುರಕ್ಷಿತವಾಗಿರುವುದಕ್ಕೆ ಕೆಲವು ಟಿಪ್ಸ್ ಇಲ್ಲಿದೆ ನೋಡಿ.
ಅಮ್ಮ ಮತ್ತು ಮಗುವಿನ ಶುಚಿತ್ವ, ಆರೋಗ್ಯಕರ ಅಭ‍್ಯಾಸಗಳು ಈ ಸಮಯದಲ್ಲಿ ಅತೀ ಮುಖ್ಯ. ಹೀಗಾಗಿ ಹೆತ್ತಮ್ಮನೇ ಆಗಿದ್ದರೂ ಮಗುವನ್ನು ಸ್ಪರ್ಶಿಸುವ ಮೊದಲು ಪ್ರತೀ ಬಾರಿಯೂ ಕೈ ತೊಳೆದುಕೊಂಡು ಸ್ಯಾನಿಟೈಸ್ ಮಾಡಿ.
ನವಜಾತ ಶಿಶುವಿಗೆ ಮಾಸ್ಕ್ ಹಾಕುವುದು ಕಷ್ಟವಾಗಬಹುದು. ಹೀಗಾಗಿ ತಾಯಂದಿರು ಮಾಸ್ಕ್ ಧರಿಸಿಯೇ ಹಾಲುಣಿಸುವುದು ಉತ್ತಮ. ಆಗಾಗ ಮಗುವಿನ ಮೈಯನ್ನು ಬಿಸಿ ನೀರಿನಲ್ಲಿ ಅದ್ದಿದ ಶುದ್ಧವಾದ ಬಟ್ಟೆಯಿಂದ ಒರೆಸಿ ವೈರಾಣು ದೇಹ ಪ್ರವೇಶಿಸಿದಂತೆ ಕಾಪಾಡಿಕೊಳ್ಳಿ.
ಮಗು ಮತ್ತು ಅಮ್ಮ ಬಳಸುವ ಬಟ್ಟೆಗಳು, ಬೆಡ್ ಶೀಟ್ ಎಲ್ಲವನ್ನೂ ಬಿಸಿ ನೀರಿನಲ್ಲಿ ಎರಡು ಗಂಟೆಗಳ ಕಾಲ ನೆನೆಸಿಟ್ಟು ಡೆಟಾಲ್ ಅಥವಾ ಆಲ್ಕೋಹಾಲ್ ಕಂಟೆಂಟ್ ಇರುವ ದ್ರಾವಣ ಬೆರೆಸಿ ಒಗೆದು, ಬಿಸಿಲಿಗೆ ಒಣಗಲು ಹಾಕಿ. ಆದಷ್ಟು ಅಮ್ಮ-ಮಗು ಇರುವ ಕೊಠಡಿಗೆ ಅಪರಿಚಿತರು, ನೆಂಟರಿಷ್ಟರು ಎಂದು ಜನ ಒಟ್ಟು ಸೇರಲು ಅವಕಾಶ ಕೊಡಬೇಡಿ.