ಬೇಸಿಗೆಯಲ್ಲಿ ಮಾಡಿ ಮಾವಿನಕಾಯಿ ಹಪ್ಪಳ

ಸೋಮವಾರ, 1 ಜೂನ್ 2020 (20:59 IST)
ಈಗ ಬೇಸಿಗೆ ಕಾಲ. ಮಾವಿನಕಾಯಿ ಮಾರುಕಟ್ಟೆಯಲ್ಲಿ ಸಾಕಷ್ಟು ಬಂದಿವೆ. ಇನ್ನೇಕೆ ತಡ, ಮಾವಿನಕಾಯಿ ಹಪ್ಪಳ ಮಾಡಿನೋಡಿ.

ಏನೇನ್ ಬೇಕು?
ಅಕ್ಕಿ ಮುಕ್ಕಾಲು ಕಿಲೋ
ಹುಳಿ ಮಾವಿನ ಕಾಯಿ 6
ಇಂಗು
ಉಪ್ಪು
ಹಸಿಮೆಣಸಿನಕಾಯಿ 15

ಮಾಡೋದು ಹೇಗೆ? : ಅಕ್ಕಿ ತೊಳೆದು ಬಿಸಿಲಿನಲ್ಲಿ ಒಣಗಿಸಿ. ಆ ಮೇಲೆ ಹಿಟ್ಟು ಮಾಡಿಕೊಳ್ಳಿ. ಇದಕ್ಕೆ ತುರಿದ ಮಾವಿನಕಾಯಿ, ಸಣ್ಣಗೆ ಮಾಡಿದ ಹಸಿಮೆಣಸಿನಕಾಯಿ, ಉಪ್ಪು, ಇಂಗು ಹಾಕಿ ಕಲಿಸಿ ನಾದಬೇಕು.
ಹಿಟ್ಟನ್ನು ಹದ ಮಾಡಿಕೊಂಡು ಸಣ್ಣ ಉಂಡೆ ಮಾಡಿ ಲಟ್ಟಿಸಬೇಕು. ಬಿಸಿಲಿನಲ್ಲಿ ಒಣಗಿಸಿ, ಎಣ್ಣೆಯಲ್ಲಿ ಕರಿದರೆ ಹಪ್ಪಳ ರೆಡಿ.

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ