ಕೊರೋನಾ ಭಯಕ್ಕೆ ಪತ್ನಿ, ಮಕ್ಕಳನ್ನು ಮನೆಯಿಂದ ಹೊರಗಟ್ಟಿದ ಪತಿರಾಯ!
ಮೇಯಲ್ಲಿ ಆರೋಪಿ ಪತ್ನಿಯನ್ನು ಮನೆಯಿಂದ ಹೊರ ಹಾಕಿದ್ದ. ಅದಾದ ಬಳಿಕ ಆಕೆ ಸುಮಾರು ಒಂದು ತಿಂಗಳು ಅಹಮ್ಮದಾಬಾದ್ ನಲ್ಲಿರುವ ಅವರ ಇನ್ನೊಂದು ಮನೆಯಲ್ಲಿ ವಾಸ ಮಾಡುತ್ತಿದ್ದಳು. ಆದರೆ ಜೂನ್ 29 ರಂದು ಅಲ್ಲಿಗೂ ಬಂದ ಪತಿ ಅಲ್ಲಿಂದಲೂ ಜಾಗ ಖಾಲಿ ಮಾಡುವಂತೆ ಒತ್ತಾಯಿಸಿದ್ದ. ಅಲ್ಲದೆ, ಆಕೆಗೆ ವಿಚ್ಛೇದನ ಪತ್ರ ನೀಡಿದ್ದ. ಇದರಿಂದ ಎಚ್ಚೆತ್ತುಕೊಂಡ ಆಕೆ ಪೊಲೀಸರಿಗೆ ಪತಿಯ ದುರ್ವರ್ತನೆ ಬಗ್ಗೆ ದೂರು ನೀಡಿದ್ದಾಳೆ. ಇದೀಗ ಪತಿಯ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.