ಸಾಮಾಜಿಕ ಅಂತರದೊಂದಿಗೆ ಇಂಗ್ಲೆಂಡ್-ವಿಂಡೀಸ್ ಕ್ರಿಕೆಟಿಗರು ಆಡಿದ್ದು ಹೇಗೆ ಗೊತ್ತಾ?

ಗುರುವಾರ, 9 ಜುಲೈ 2020 (09:11 IST)
ಸೌಥಾಂಪ್ಟನ್: ಕೊರೋನಾ ಬಳಿಕ ಇದೇ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯವೊಂದು ನಡೆಯುತ್ತಿದ್ದು, ಇಂಗ್ಲೆಂಡ್ ಮತ್ತು ವೆಸ್ಟ್ ಇಂಡಿಸ್ ಕ್ರಿಕೆಟಿಗರು ಸಾಮಾಜಿಕ ಅಂತರ ಕಾಯ್ದುಕೊಂಡು ಆಡಿದ ರೀತಿ ವಿಶಿಷ್ಟವಾಗಿತ್ತು.


ಸಾಮಾನ್ಯವಾಗಿ ಪಂದ್ಯಕ್ಕೆ ಮೊದಲು ಆಟಗಾರರು ಒಟ್ಟಾಗಿ ಒಬ್ಬರ ಹೆಗಲ ಮೇಲೊಬ್ಬರು ಕೈ ಇಟ್ಟು ವೃತ್ತ ಹಾಕಿಕೊಂಡು ಪಂದ್ಯದ ಯೋಜನೆಗಳ ಬಗ್ಗೆ ಚರ್ಚೆ ನಡೆಸುತ್ತಾರೆ. ಆದರೆ ಈ ಪಂದ್ಯಕ್ಕೆ ಮೊದಲು ಇಂಗ್ಲೆಂಡ್ ಆಟಗಾರರು ಸಾಮಾಜಿಕ ಅಂತರ ಕಾಯ್ದುಕೊಂಡು ವೃತ್ತ ಸೇರಿದ್ದಾರೆ. ಇನ್ನು, ಟಾಸ್ ವೇಳೆಯೂ ದೂರ ದೂರ ನಿಂತುಕೊಂಡೇ ಉಭಯ ನಾಯಕರು ಪಾಲ್ಗೊಂಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ