ಕೊರೋನಾದ ಈ ಲಕ್ಷಣಗಳಿದ್ದರೆ ಮಾತ್ರ ಆಸ್ಪತ್ರೆಗೆ ದಾಖಲಾದರೆ ಸಾಕು

ಸೋಮವಾರ, 26 ಏಪ್ರಿಲ್ 2021 (09:25 IST)
ಬೆಂಗಳೂರು: ಕೊರೋನಾ ಎಂದ ತಕ್ಷಣ ಭಯ ಬೀಳಬೇಕಿಲ್ಲ. ಕೊರೋನಾ ಪಾಸಿಟಿವ್ ಬಂದ ತಕ್ಷಣ ಆಸ್ಪತ್ರೆಗೆ ದೌಡಾಯಿಸಲು ಧಾವಂತ ಮಾಡಬೇಡಿ. ಈ ಮೂರು ವಿಚಾರಗಳ ಬಗ್ಗೆ ಗಮನಹರಿಸಿದರೆ ಸಾಕು.


ಆಕ್ಸಿಜನ್ ಲೆವೆಲ್ ನೋಡುವ ಮೀಟರ್ ಒಂದನ್ನು ಖರೀದಿಸಿ ಮನೆಯಲ್ಲಿಯೇ ಆಗಾಗ ಪರೀಕ್ಷಿಸಿಕೊಳ್ಳುತ್ತಿರಿ. ಒಂದು ವೇಳೆ ನಿಮ್ಮ ಆಕ್ಸಿಜನ್ ಲೆವೆಲ್ 95 ಕ್ಕಿಂತ ಕಡಿಮೆಯಾಗಿದ್ದರೆ ಮಾತ್ರ ವೈದ್ಯರ ನೆರವು ಪಡೆಯಿರಿ.

ಇನ್ನು, ದೇಹದ ಉಷ್ಣತೆ 102 ಡಿಗ್ರಿಗಿಂತ ಜಾಸ್ತಿಯಾಗದಂತೆ ನೋಡಿಕೊಳ್ಳಿ. ಅದೇ ರೀತಿ ಕಫದಿಂದ ಕೂಡಿದ ಕೆಮ್ಮು ಬರದಂತೆ ನೋಡಿಕೊಂಡರೆ ಸಾಕು. ಈ ಮೂರು ಅಂಶಗಳಲ್ಲಿ ಏರುಪೇರಾದರೆ ಮಾತ್ರ ಆಸ್ಪತ್ರೆಗೆ ದಾಖಲಾದರೆ ಸಾಕು. ಇಲ್ಲದೇ ಹೋದರೆ ಇಲ್ಲದ ಆತಂಕ ಬಿಟ್ಟು ವೈದ್ಯರು ಹೇಳಿದ ಔಷಧ ಸೇವಿಸಿಕೊಂಡು ಮನೆಯಲ್ಲಿಯೇ ಕ್ವಾರಂಟೈನ್ ಆದರೆ ಸಾಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ