ಲಾಕ್ ಡೌನ್ ಹೀಗೇ ಮುಂದುವರಿದಿರೆ ಕೊರೋನಾಗಿಂತ ಹಸಿವಿನ ಸಮಸ್ಯೆಯೇ ಹೆಚ್ಚಾಗಲಿದೆ!

ಶನಿವಾರ, 2 ಮೇ 2020 (09:16 IST)
ಬೆಂಗಳೂರು: ಕೊರೋನಾವೈರಸ್ ಬಾರದಂತೆ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿ ಇದೀಗ ಎರಡನೇ ಅವಧಿ ಮುಕ್ತಾಯದ ಹಂತಕ್ಕೆ ಬಂದಿದೆ. ಆದರೆ ಇನ್ನೊಂದು ಅವಧಿಗೆ ಲಾಕ್ ಡೌನ್ ಮಾಡುವ ಬಗ್ಗೆಯೂ ಮಾತುಗಳು ಕೇಳಿಬರುತ್ತಿದೆ.


ಇತ್ತೀಚೆಗೆ ಇನ್ ಫೋಸಿಸ್ ಅಧ್ಯಕ್ಷ ನಾರಾಯಣ ಮೂರ್ತಿಯವರು, ಹೀಗೇ ಲಾಕ್ ಡೌನ್ ಮುಂದುವರಿಸುತ್ತಾ ಬರುವುದರಿಂದ ಭಾರತದಲ್ಲಿ ಹಸಿವಿನಿಂದ ಸಾಯುವವರ ಸಂಖ್ಯೆಯೇ ಹೆಚ್ಚಳವಾಗಲಿದೆ ಎಂದಿದ್ದರು.

ಅವರ ಮಾತಿನಲ್ಲೂ ಸತ್ಯವಿಲ್ಲದಿಲ್ಲ. ಯಾಕೆಂದರೆ ಲಾಕ್ ಡೌನ್ ನಿಂದಾಗಿ ಈಗಾಗಲೇ ಹಲವು ಸಣ್ಣ ಉದ್ದಿಮೆಗಳು ಬಾಗಿಲು ಹಾಕುವ ಹಂತಕ್ಕೆ ಬಂದಿದೆ. ಹಲವು ಕಾರ್ಮಿಕರು ಕೆಲಸ ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಕೊರೋನಾ ಅಂತೂ ಸದ್ಯಕ್ಕೆ ದೂರವಾಗುವ ಲಕ್ಷಣ ಕಾಣುತ್ತಿಲ್ಲ. ಹೀಗಾಗಿ ಕೊರೋನಾ ಸಂಪೂರ್ಣವಾಗಿ ಮುಕ್ತವಾಗುವವರೆಗೂ ಲಾಕ್ ಡೌನ್ ಮುಂದುವರಿಸಿದರೆ ಭಾರತದ ಹಲವು ಉದ್ಯೋಗಸ್ಥರ, ಕೃಷಿಕರ, ವ್ಯಾಪಾರಿಗಳ ಜೀವನ ಬೀದಿಗೆ ಬರಲಿದೆ.

ಇದನ್ನು ಗಮನದಲ್ಲಿಟ್ಟುಕೊಂಡೇ ಸರ್ಕಾರ ಈಗ ಹಂತ ಹಂತವಾಗಿ ಲಾಕ್ ಡೌನ್ ಸಡಿಲಿಸುವ ನಿರ್ಧಾರಕ್ಕೆ ಬರುತ್ತಿದೆ. ಆದರೆ ಲಾಕ್ ಡೌನ್ ಸಡಿಲವಾಯಿತೆಂದು ನಮ್ಮ ಜವಾಬ್ಧಾರಿ ಮರೆತು ವರ್ತಿಸಿದರೆ ಸಂಕಷ್ಟ ನಮಗೇ ಎನ್ನುವುದನ್ನು ಮರೆಯಬಾರದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ